ಎಪಿಎಲ್‌ಐನ ವಿಶ್ವ ಸಮ್ಮೇಳನ: ದಂತವೈದ್ಯ ಯಾವಗಲ್‌ಗೆ ಆಹ್ವಾನ

ಎಪಿಎಲ್‌ಐನ ವಿಶ್ವ ಸಮ್ಮೇಳನ: ದಂತವೈದ್ಯ ಯಾವಗಲ್‌ಗೆ ಆಹ್ವಾನ

Updated : 27.08.2022

ಹುಬ್ಬಳ್ಳಿ: ಏಷ್ಯಾ ಫೆಸಿಪಿಕ್ ಲೇಸರ್ ಇನ್‌ಸ್ಟಿಟ್ಯೂಟ್ (ಎಪಿಎಲ್‌ಐ) ಮತ್ತು ಯುರೋಪಿಯನ್ ಮೆಡಿಕಲ್ ಲೇಸರ್ ಅಸೋಸಿಯೇಷನ್‌ (ಇಎಂಎಲ್‌ಎ) ತೈವಾನ್‌ನ ತೈಪೆಯಲ್ಲಿ ಅಕ್ಟೋಬರ್ 28ರಿಂದ 30ರವರೆಗೆ ಆಯೋಜಿಸಿರುವ ಎಪಿಎಲ್‌ಐನ 16ನೇ ವಿಶ್ವ ಸಮ್ಮೇಳನ–2022 ಮುಖ್ಯ ಭಾಷಣಕಾರರಾಗಿ ನಗರದ ದಂತ ಶಸ್ತ್ರಚಿಕಿತ್ಸಕ ಹಾಗೂ ಲೇಸರ್ ತಜ್ಞ ಡಾ. ಚಂದ್ರಶೇಖರ ಯಾವಗಲ್ ಅವರನ್ನು ಆಹ್ವಾನಿಸಲಾಗಿದೆ.

ಯಾವಗಲ್ ಅವರು ಸಮ್ಮೇಳನದಲ್ಲಿ ಭಾಗವಹಿಸುವ ಭಾಷಣಕಾರರ ತಂಡದಲ್ಲಿರುವ ಏಕೈಕ ಭಾರತೀಯ ವೈದ್ಯರಾಗಿದ್ದು ಅಮೆರಿಕ, ಬ್ರಿಟನ್, ಫ್ರಾನ್ಸ್, ದಕ್ಷಿಣ ಕೊರಿಯಾ, ಚೀನಾದವರೊಂದಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ. ‘ಓರಲ್ ಕ್ಯಾನ್ಸರ್: ಎ ಥೆರಾನೋಸ್ಟಿಕ್ ಸ್ಟ್ರಾಟಜಿಯಲ್ಲಿ ಲೇಸರ್ ಫೋಟೋಮೆಡಿಸಿನ್’ ವಿಷಯಕ್ಕೆ ಸಂಬಂಧಿಸಿದ ತಮ್ಮ ಸಂಶೋಧನೆ ಕುರಿತು ಅವರು ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

© Copyright 2022, All Rights Reserved Kannada One News