ಮುಟ್ಟಿನ ನೋವು ಶಮನಕ್ಕೆ ಇಲ್ಲಿವೆ ಮನೆಮದ್ದು

ಮುಟ್ಟಿನ ನೋವು ಶಮನಕ್ಕೆ ಇಲ್ಲಿವೆ ಮನೆಮದ್ದು

Updated : 11.09.2022

ಹೆಚ್ಚಿನ ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ಸಹಿಸಲಸಾಧ್ಯವಾದ ಕಿಬ್ಬೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಎಲ್ಲರಲ್ಲೂ ಹೆಚ್ಚಾಗಿಯೇ ಇರುತ್ತದೆಂದು ಹೇಳಲಾಗದು. ಕೆಲವರಿಗೆ ಮುಟ್ಟಿನ ನೋವು ಅರಿವಿಗೆ ಬರವುದೇ ಇಲ್ಲ. ಅಂದರೆ ಅಂಥವರಲ್ಲಿ ನಾರ್ಮಲ್ ಪೇನ್ ಇರುತ್ತದೆ. ಕೆಲವರಲ್ಲಿ ಮಾತ್ರ ಹೇಳತೀರದ ನೋವು. ಇಂಥವರಿಗೆ ಮುಟ್ಟಿನ ದಿನಗಳು ಸಮೀಪಿಸುತ್ತಿದ್ದಂತೆ ಭಯ ಶುರುವಾಗತ್ತೆ. ಈ ನೋವು ಶಮನ ಆದ್ರೆ ಸಾಕಪ್ಪಾ ಎಂದು ಮಾತ್ರೆ ಸೇವಿಸಿ ಹಲವಾರು ಅಡ್ಡಪರಿಣಾಮಗಳಿಗೆ ತುತ್ತಾಗುತ್ತಾರೆ. ಹೀಗಾಗಿ ಮಾತ್ರೆಗಳ ಬದಲಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲದ ನೈಸರ್ಗಿಕವಾಗಿ ಎಲ್ಲರಿಗೂ ಸುಲಭವಾಗಿ ದೊರೆಯುವ, ಸಾಮಾನ್ಯವಾಗಿ ಎಲ್ಲರ ಅಡುಗೆ ಮನೆಯಲ್ಲೂ ಇರುವ ಈ ಪದಾರ್ಥಗಳನ್ನು ಬಳಸಿ ನೋವು ಕಡಿಮೆಗೊಳಿಸಬಹುದು. ಹಾಗಾದರೆ ಬನ್ನಿ ಇವತ್ತು ಈ ಬಗ್ಗೆ ತಿಳಿದುಕೊಳ್ಳೋಣ...

1. ಹಾಲು +ಬೆಲ್ಲ+ಅರಿಶಿನ ಪುಡಿ:
ಬಿಸಿ ಹಾಲಿನಲ್ಲಿ ಸ್ವಲ್ಪ ಬೆಲ್ಲ ಮತ್ತು ಅರಿಶಿನ ಪುಡಿ ಬೆರೆಸಿ ಕುಡಿದರೆ ತೀವ್ರ ನೋವು ಕ್ರಮೇಣ ಕಡಿಮೆಯಾಗುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ 'ಡಿ'   'ಎ'  'ಬಿ' ಇರುವುದರಿಂದ ಮುಟ್ಟಿನ ನೋವು ಬಹುಬೇಗ ಮಾಯವಾಗುತ್ತದೆ.

2. ನಿಂಬೆಹಣ್ಣಿನ ಜೂಸ್:
ಸ್ವಲ್ಪ ಉಗುರು ಬೆಚ್ಚಗಿನ ನೀರಿಗೆ  ಸ್ವಲ್ಪ ನಿಂಬೆಹಣ್ಣಿನ ರಸ ಹಿಂಡಿ ಕುಡಿದರೆ ಕಿಬ್ಬೊಟ್ಟೆ ನೋವು ಕಡಿಮೆಯಾಗುತ್ತದೆ. ಸ್ವಲ್ಪ ಹೊತ್ತಿನ ಬಳಿಕ ನಿರಾಳವೆನಿಸುತ್ತದೆ. ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು.

3. ಜೀರಿಗೆ: 
ಎಲ್ಲರ ಅಡುಗೆ ಮನೆಯಲ್ಲಿ ಇರುವ ಮತ್ತು ಕೈಗೆಟಕುವ ಬೆಲೆಗೆ ಸಿಗುವ  ಸ್ವಲ್ಪ ಜೀರಿಗೆಯನ್ನು ನೀರಿನಲ್ಲಿ ಕದಿಸಿ ಆ ಜೀರಿಗೆ ನೀರನ್ನು ಕುಡಿದರೆ ನೋವು ಕಡಿಮೆಯಾಗುತ್ತದೆ.

4.  ಹಾಟ್ ಬ್ಯಾಗ್ : 
ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಮೇಲೆ ಹಾಟ್ ಬ್ಯಾಗ್ನಿಂದ ಕಾಯಿಸುವುದರಿಂದ ನೋವು ಕಡಿಮೆಯಾಗಿ ರಿಲ್ಯಾಕ್ಸ್ ಅನಿಸುತ್ತದೆ.

5. ಬಿಸಿನೀರಿನ ಸ್ನಾನ: ಮುಟ್ಟಿನ ಸಮಯದಲ್ಲಿ ಜಾಸ್ತಿ ಕಾಯಿಸಿದ ನೀರನ್ನು ಬೆನ್ನು ಮತ್ತು ಕಿಬ್ಬೊಟ್ಟೆಯ ಮೇಲೆ ಹಾಕಿಕೊಂಡು ಸ್ನಾನ ಮಾಡುವುದರಿಂದ ಸ್ನಾಯುಗಳು ಸಡಿಲಗೊಂಡು ಸಲೀಸಾಗಿ ನೋವು ಕಡಿಮೆಯಾಗುತ್ತದೆ.
 
6. ಸಾಸಿವೆ ಎಣ್ಣೆಯ ಮಸಾಜ್:  ಸ್ವಲ್ಪ ಸಾಸಿವೆ ಎಣ್ಣೆಯಿಂದ ಕಿಬ್ಬೊಟ್ಟೆಗೆ ಮಸಾಜ್ ಮಾಡಿದರೆ  ನೋವು ಕಡಿಮೆಯಾಗುತ್ತದೆ

7. ಎಳೆನೀರು:
  ಮುಟ್ಟಿನ ಸಮಯದಲ್ಲಿ ಎಳೆನೀರು ಕುಡಿದರೆ ಒಳ್ಳೆಯದು.  ನೋವು ಕಡಿಮೆಯಾಗುತ್ತದೆ.

8. ಬಾಳೆಹಣ್ಣು:  ಬಾಳೆಹಣ್ಣು ಎಲ್ಲರ ಕೈಗೆಟುಕುವ ಬೆಲೆಗೆ ಸಿಗುವ ಸರ್ವೇ ಸಾಮಾನ್ಯವಾದ ಹಣ್ಣು. ವರ್ಷದ ಎಲ್ಲ ದಿನಗಳಲ್ಲೂ ಈ ‌ಹಣ್ಣು ದೊರೆಯುತ್ತದೆ. ಈ ಹಣ್ಣು ವಿಟಮಿನ್  'ಬಿ6' ಮೆಗ್ನೀಷಿಯಂಗಳಿಂದ ಕೂಡಿದೆ.

ಈ ಎಲ್ಲ ಆರೋಗ್ಯಕರ ಗುಣಗಳನ್ನು ಹೊಂದಿರುವ ಬಾಳೆಹಣ್ಣನ್ನು ಮುಟ್ಟಿನ ಸಮಯದಲ್ಲಿ ತಿಂದರೆ ನೋವು ಮತ್ತು ಶಕ್ತಿಹೀನತೆ ಕಡಿಮೆಯಾಗುತ್ತದೆ. ಪ್ರತಿದಿನದ ಸೇವನೆಗೂ ಬಾಳೆಹಣ್ಣು ಸೂಕ್ತ. ಹಲವು ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ನಿಯಂತ್ರಿಸಬಹುದು.

9. ದಾಲ್ಚಿನ್ನಿ
: ಕೊರೊನಾ ಸಮಯದಲ್ಲಂತೂ ದಾಲ್ಚಿನ್ನಿ, ಶುಂಠಿ, ಲವಂಗಗಳಿಂದ ತಯಾರಿಸಿದ ಕಷಾಯ ಎಲ್ಲರ ಮನೆಯಲ್ಲೂ ಸರ್ವೇ ಸಾಮಾನ್ಯವಾಗಿತ್ತು. ಹಾಗೆಯೇ ಮುಟ್ಟಿನ ಸಮಯದಲ್ಲಿ  ದಾಲ್ಚಿನ್ನಿ ಕಷಾಯ ಮಾಡಿ ಕುಡಿಯುವುದರಿಂದ ನೋವು ಕಡಿಮೆಗೊಳಿಸಬಹುದು. ದಾಲ್ಚಿನ್ನಿಯಲ್ಲಿ ಆಂಟಿಸ್ಪಾಸ್ಮೋಡಿಕ್ ಗುಣ , ಕ್ಯಾಲ್ಸಿಯಂ, ಮ್ಯಾಂಗನೀಸ್ ಮತ್ತು ಕಬ್ಬಿನದ ಅಂಶ ಅಧಿಕವಾಗಿರುವುದರಿಂದ ದೇಹಕ್ಕೆ ಪೂರಕ ಪೋಷಣೆ ದೊರೆಯುತ್ತದೆ.

10: ಶುಂಠಿ ಮತ್ತು ಬ್ಲಾಕ್ ಟೀ: ಶುಂಠಿ  ಸಕ್ಕರೆ  ಟೀ ಪೌಡರ್ ಇವೆಲ್ಲ ಹಾಕಿ ಬ್ಲಾಕ್ ಟೀ ಮಾಡಿ ಕುಡಿದರೆ ಕಿಬ್ಬೊಟ್ಟೆಯ ನೋವು ಕಡಿಮೆಗೊಳಿಸಹುದು.

-ಸೈನಾಜ ಮುಲ್ತಾನಿ

© Copyright 2022, All Rights Reserved Kannada One News