ತಲೆಹೊಟ್ಟಿನ ಸಮಸ್ಯೆಯೇ?: ಇಲ್ಲಿವೆ 10 ಮನೆ ಮದ್ದುಗಳು...!

ತಲೆಹೊಟ್ಟಿನ ಸಮಸ್ಯೆಯೇ?: ಇಲ್ಲಿವೆ 10 ಮನೆ ಮದ್ದುಗಳು...!

Updated : 27.08.2022

ಸಾಮಾನ್ಯವಾಗಿ ಚಳಿಗಾಲದಲ್ಲಿ ತಲೆಯಲ್ಲಿನ ಹೊಟ್ಟು ಹೆಚ್ಚಾಗುತ್ತದೆ, ನಿಮ್ಮ ಕೈ ಅಥವಾ ಕಾಲುಗಳ ಚರ್ಮ ಒಣಗಿದ ಹಾಗೆಯೇ ತಲೆಯ ಕೂದಲಿನ ಕೆಳಭಾಗದ ಚರ್ಮ ಒಣಗುತ್ತದೆ, ಈ ರೀತಿ ಒಣಗಿದ ಚರ್ಮ ಉದುರುವುದನ್ನು ತಲೆಯ ಹೊಟ್ಟು ಎಂದು ಕರೆಯುತ್ತೇವೆ, ಈ ಹೊಟ್ಟಿನ ಸಮಸ್ಯೆಗೆ ನಾವು ಅನೇಕ ಶ್ಯಾಂಪೂಗಳನ್ನು ಬಳಸುವುದು ಉಂಟು, ಈ ರೀತಿಯ ಶಾಂಪು ಗಳನ್ನು ಬಳಸುವುದರಿಂದ ಒಂದು ದಿನಕ್ಕೆ ಮಾತ್ರ ನಿಮ್ಮ ತಲೆ ಹೊಟ್ಟು ನಿಯಂತ್ರಣ ಗೊಳ್ಳುತ್ತದೆ ಮತ್ತೆ ಅದೇ ಸಮಸ್ಯೆ ಶುರುವಾಗುತ್ತದೆ. ರಾಸಾಯನಿಕ ಶ್ಯಾಂಪೂಗಳನ್ನು ಬಳಸುವ ಬದಲು ಮನೆಯಲ್ಲಿ ನೈಸರ್ಗಿಕ ಪದಾರ್ಥಗಳನ್ನು ಬಳಿಸಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಬಹುದಾಗಿದೆ ಹೇಗೆ ಅಂತಾ ತೀಳಿಸಿಕೊಡ್ತಿವಿ ವೀಡಿಯೋ ಪೂರ್ತಿ ನೋಡಿ

1 ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ತಲೆಹೊಟ್ಟು ಸಮಸ್ಯೆಯನ್ನ ನಿವಾರಿಸುತ್ತವೆ. ರಾತ್ರಿ ಮಲಗುವ ಮುನ್ನ ಉಗುರು ಬೆಚ್ಚಗೆ ತೆಂಗಿನ ಎಣ್ಣೆಯನ್ನು ಕಾಯಿಸಿ ತಲೆಗೆ ಮಸಾಜ್ ಮಾಡಿಕೊಂಡು ಮಲಗಬೇಕು. ನಂತರ ಬೆಳಿಗ್ಗೆ ಎದ್ದು, ಉಗುರು ಬೆಚ್ಚಗಿನ ನೀರಿನಲ್ಲಿ ತಲೆ ಸ್ನಾನ ಮಾಡುವುದರಿಂದ ಹೊಟ್ಟು ಕಡಿಮೆಯಾಗುವ ಸಾಧ್ಯತೆ ಹೆಚ್ಚು. ವಾರಕ್ಕೆ ಎರಡು ಬಾರಿ ಹೀಗೆ ಮಾಡುವುದರಿಂದ ತಲೆಹೊಟ್ಟು ಸಮಸ್ಯೆಯನ್ನ ನಿವಾರಿಸಿಕೊಳ್ಳಬಹುದು.2. ಬೇಕಿಂಗ್ ಸೋಡಾ:
ಅಡಿಗೆ ಸೋಡಾ ತಲೆಹೊಟ್ಟಿಗೆ ಒಂದು ಸ್ಕ್ರಬ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವ ಮೂಲಕ ನಿಧಾನವಾಗಿ ತಲೆಹೊಟ್ಟನ್ನು ಹೊರಹಾಕುತ್ತದೆ. ಒದ್ದೆಯಾದ ಕೂದಲಿಗೆ ನೇರವಾಗಿ ಅಡಿಗೆ ಸೋಡಾವನ್ನು ಹಾಕಿ ಅದನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. ಒಂದು ನಿಮಿಷ ಅಥವಾ ಎರಡು ನಿಮಿಷಗಳ ಕಾಲ ಹಾಗೆ ಬಿಡಿ, ನಂತರ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ.

3. ಬೆಳ್ಳುಳ್ಳಿ: ತಲೆಹೊಟ್ಟು ಚಿಕಿತ್ಸೆಗಾಗಿ ನೀವು ಬೆಳ್ಳುಳ್ಳಿ ಯನ್ನು ಸಹ ಬಳಸಬಹುದು. ಮೊದಲಿಗೆ, ಒಂದು ಅಥವಾ ಎರಡು ಬೆಳ್ಳುಳ್ಳಿಗಳನ್ನು ಪುಡಿಮಾಡಿ ನಂತರ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ನಿಮ್ಮ ನೆತ್ತಿಗೆ ಹಚ್ಚಿ. ಕೆಲ ಹೊತ್ತಿನ ಬಳಿಕ ತಲೆ ಸ್ನಾನ ಮಾಡಿ.

4. ಅಲೋವೆರಾ: ಅಲೋವೆರಾ ತಲೆಯನ್ನು ತಂಪಾಗಿಡುವುದು ಮಾತ್ರವಲ್ಲದೆ ನೆತ್ತಿಯಲ್ಲಿನ ಹೊಟ್ಟನ್ನು ಹೊರಹಾಕುತ್ತದೆ. ನೀವು ಅಲೋವೆರಾದಿಂದ ತೆಗೆದ ಜೆಲ್ನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿ. ಸುಮಾರು 20 ರಿಂದ 30 ನಿಮಿಷಗಳ ಕಾಲ ಹಾಗೆ ಬಿಡಿ. ನಂತರ ತಲೆ ತೊಳೆದುಕೊಳ್ಳಿ.

5 ಮೆಂತ್ಯೆ ಬೀಜ: ಮೆಂತ್ಯೆ ಬೀಜವನ್ನು ಅರೆದು, ಪೇಸ್ಟ್ ಮಾಡಿ ತಲೆಕೂದಲಿಗೆ ಹಚ್ಚಿದರೆ ತಲೆ ಹೊಟ್ಟು ಕಡಿಮೆಯಾಗುವುದು. ಕೊಬ್ಬರಿ ಎಣ್ಣೆಯಲ್ಲಿ ಮೆಂತೆಯ ಬೀಜಗಳನ್ನು ನೆನೆಯಿಸಿ ಅದನ್ನು ತಲೆಗೆ ಬಳಸಿದರೆ ಅದರ ಔಷಧೀಯ ಗುಣದಿಂದ ತಲೆಗೆ ತಂಪು ಕೊಡುವುದರ ಜೊತೆಗೆ ಹೊಟ್ಟಿನ ಸಮಸ್ಯೆ ನಿವಾರಣೆಗೆ ರಾಮಬಾಣವಾಗಿದೆ.6. ನಿಂಬೆ ಮತ್ತು ಮೊಸರು: ಮುಕ್ಕಾಲು ಕಪ್ ಮೊಸರಿಗೆ ನಿಂಬೆರಸ ಹಿಂಡಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಸ್ನಾನ ಮಾಡುವುದರಿಂದ ನಿಮ್ಮ ತಲೆ ಕೂದಲು ಶೈನಿಂಗ್ ಜೊತೆ ಹೊಟ್ಟಿನ ನಿವಾರಣೆ ಕೂಡಾ ಆಗುತ್ತದೆ. ಇದು ಅತಿ ಸುಲಭವಾದ ನೈಸರ್ಗಿಕ ವಿಧಾನವಾಗಿದೆ.


7. ಮೊಟ್ಟೆಯ ಬಿಳಿ ಭಾಗ: ಮೊಟ್ಟೆಯ ಬಿಳಿ ಭಾಗವನ್ನು ಸ್ವಲ್ಪ ನಿಂಬೆ ರಸ ಹಾಕಿ ಅದನ್ನು ತಲೆಗೆ ಹಚ್ಚಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯಬೇಕು. ಇದರಿಂದ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.8. ಶುಂಠಿ ಮತ್ತು ಆಲಿವ್ ಎಣ್ಣೆ: ಶುಂಠಿಯನ್ನು ಆಲಿವ್ ಎಣ್ಣೆಗೆ ಸೇರಿಸಿ, ಬಿಸಿ ಮಾಡಿ, ಸ್ನಾನಕ್ಕೆ ಹೋಗುವ ಕೆಲವು ನಿಮಿಷಗಳ ಮುನ್ನ ತಲೆಗೆ ಹಚ್ಚಿ ಮಸಾಜ್ ಮಾಡಿಕೊಂಡು 5 ನಿಮಿಷದ ನಂತರ ಸ್ನಾನ ಮಾಡಿದರೆ ಬೇಗನೆ ತಲೆಹೊಟ್ಟು ತೊಲಗುತ್ತದೆ.

9. ಕಾಫಿ ಹೇರ್ ಮಾಸ್ಕ್‌: ಒಂದು ಚಮಚ ತೆಂಗಿನೆಣ್ಣೆಯನ್ನು ಬಿಸಿ ಮಾಡಿ, ಅದಕ್ಕೆ ಒಂದು ಚಮಚ ಕಾಫಿ ಪುಡಿ, ಒಂದು ಚಮಚ ಜೇನು ಸೇರಿಸಿ ಮಿಕ್ಸ್ ಮಾಡಿ 2 ನಿಮಿಷ ಬಿಡಿ. ನಂತರ ರೆಡಿಯಾದ ಕಾಫಿ ಮಾಸ್ಕ್‌ಅನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ತಲೆ ಹೊಟ್ಟು ಹೋಗುವವರೆಗೆ ವಾರದಲ್ಲಿ 2-3 ಬಾರಿ ಕಾಫಿ ಮಾಸ್ಕ್ ಬಳಸಿ.

10. ಬೇವು ಮತ್ತು ಮೊಸರು: ಮೊದಲು ಬೇವಿನ ಎಲೆಯನ್ನು ತೆಗೆದುಕೊಂಡು ರುಬ್ಬಿಕೊಳ್ಳಿ. ಇದಕ್ಕೆ ಒಂದು ಕಪ್ ಮೊಸರು ಸೇರಿಸಿನಂತರ ತಲೆಗೆ ಹಚ್ಚಿಕೊಳ್ಳಿ. 20 ನಿಮಿಷದ ನಂತರ ಕೂದಲನ್ನು ತೊಳೆದುಕೊಳ್ಳಿ. ಮೊಸರಿನಲ್ಲಿ ತಂಪಾದ ಮತ್ತು ಬೇವಿನ ಎಲೆಯಲ್ಲಿ ಆಂಟಿ ಫಂಗಲ್ ಗುಣಲಕ್ಷಣ ಇರುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ನೋಡಿದ್ರಲ್ಲಾ ಹೇಗೆ ಮನೆಯಲ್ಲಿರೋ ಪದಾರ್ಥಗಳನ್ನು ಬಳಸಿ ತಲೆ ಹೊಟ್ಟಿನ ಸಮಸ್ಯೆಯನ್ನು ಕ್ರಮೇಣ ಪರಿಹರಿಸಿಕೊಳ್ಳಬಹುದೆಂದು ಇಂದಿನ ಆಧುನಿಕ ಜೀವನ ಶೈಲಿಯಿಂದ ಬಹುತೇಕ ಜನರು ತಲೆಹೊಟ್ಟಿನ ಸಮಸ್ಯೆಯನ್ನ ಎದುರಿಸುತ್ತಿರುತ್ತಾರೆ. ತಲೆಹೊಟ್ಟನ್ನು ನಿವಾರಿಸಿಕೊಳ್ಳುವುದಕ್ಕಾಗಿ ಯಾವುದ್ಯಾವುದೋ ರಾಸಾಯನಿಕ ಶ್ಯಾಂಪೂಗಳನ್ನು ಬಳಸಿ ಒಂದು ಸಮಸ್ಯೆಯಿಂದ ಮತ್ತೊಂದು ಸಮಸ್ಯೆಗೆ ತುತ್ತಾಗುವ ಸಂಭವನಿಯತೆ ಜಾಸ್ತಿ ಇರುತ್ತದೆ ಆದ್ದರಿಂದ ಆದಷ್ಟು ಮನೆಯಲ್ಲಿ ನೈಸರ್ಗಿಕ ಪದಾರ್ಥಗಳನ್ನು ಬಳಿಸಿ ತಲೆಹೊಟ್ಟು ನಿವಾರಣೆ ಮಾಡಿಕೊಳ್ಳಿ.

-ಕನ್ನಡ ಒನ್‌ನ್ಯೂಸ್‌ ಬಳಗ

© Copyright 2022, All Rights Reserved Kannada One News