Flash News:
ನನಗೂ ಜೀವ ಬೆದರಿಕೆ ಇದೆ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ್ ಮೌಜೊ

ನನಗೂ ಜೀವ ಬೆದರಿಕೆ ಇದೆ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ್ ಮೌಜೊ

Updated : 04.10.2022

ಠಾಣೆ: ‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ನನಗೂ ಜೀವ ಬೆದರಿಕೆ ಇದೆ’ ಎಂದು ಹೇಳಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಾಮೋದರ್ ಮೌಜೊ, ‘ನನ್ನ ಆಲೋಚನೆಗಳನ್ನು ಯಾವುದೇ ಬಂದೂಕಿನಿಂದ ಅಂತ್ಯಗೊಳಿಸಲು ಆಗದು’ ಎಂದು ಹೇಳಿದರು.  

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಗೌರಿ ಲಂಕೇಶ್ ನಿಧನದ ನಂತರ ನಾನೂ ಸಹ ಕೆಲವರ ಹಿಟ್‌ಲಿಸ್ಟ್‌ನಲ್ಲಿದ್ದೇನೆ ಎಂಬುದು ಗೊತ್ತಾಯಿತು. ಆದರೆ, ಲೇಖಕನಾಗಿ ನನ್ನ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದರಿಂದ ರಕ್ಷಣೆಯ ಅಗತ್ಯವಿಲ್ಲ. ನಾಲ್ಕು ವರ್ಷಗಳಿಂದ ನನಗೆ ಇನ್ನೂ ಗುಂಡು ಹಾರಿಸಲಾಗಿಲ್ಲ. ನನ್ನ ಆಲೋಚನೆಗಳನ್ನು ಗುಂಡಿನಿಂದ ಕೊನೆಗಾಣಿಸಲು ಸಾಧ್ಯವಿಲ್ಲ. ನಾನು ನಿರ್ಭೀತಿಯಿಂದ ಮಾತನಾಡುತ್ತೇನೆ’ ಎಂದು ತಿಳಿಸಿದರು. 

ಸಾಹಿತ್ಯಾಸಕ್ತರು ರಾಜಕೀಯದಲ್ಲಿ ಭಾಗಿಯಾಗಬಾರದು ಎಂದು ಹೇಳುವುದು ತಪ್ಪು. ಆದರೆ, ಪಕ್ಷ ರಾಜಕಾರಣದಲ್ಲಿ ತೊಡಗಬಾರದು ಎಂದು ಹೇಳಿದರು.

ಕೊಂಕಣಿಯಲ್ಲಿ ಪ್ರಗತಿಪರ ಬರವಣಿಗೆ ಮತ್ತು ವಿಶೇಷವಾಗಿ ಅವರ ಕಾದಂಬರಿ ‘ಕಾರ್ಮೆಲಿನ್’ ನಿಂದ ಹೆಸರುವಾಸಿಯಾದ ಮೌಜೊ ಅವರಿಗೆ ಕೇಂದ್ರ ಗೃಹ ಸಚಿವಾಲಯ ಮತ್ತು ಲಂಕೇಶ್ ಸಾವಿನ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಗುಪ್ತಚರ ಮಾಹಿತಿ ಮೇರೆಗೆ 2018ರ ಜುಲೈನಲ್ಲಿ ಗೋವಾ ಪೊಲೀಸರು ಭದ್ರತೆ ಒದಗಿಸಲಾಗಿದೆ.

© Copyright 2022, All Rights Reserved Kannada One News