'ಚಿಲುಮೆ ಸಂಸ್ಥೆ'ಗೆ ಕೆಲಸ ಕೊಟ್ಟಿದ್ದು ಮೈತ್ರಿ ಸರ್ಕಾರ: ರವಿಕುಮಾರ್

'ಚಿಲುಮೆ ಸಂಸ್ಥೆ'ಗೆ ಕೆಲಸ ಕೊಟ್ಟಿದ್ದು ಮೈತ್ರಿ ಸರ್ಕಾರ: ರವಿಕುಮಾರ್

Updated : 18.11.2022

ಬೆಂಗಳೂರು: “ಮತದಾರರ ಮಾಹಿತಿ ಸಂಗ್ರಹ ಮತ್ತು ಮತದಾರರ ಜಾಗೃತಿಯ ಕಾರ್ಯವನ್ನು ‘ಚಿಲುಮೆ’ ಸಂಸ್ಥೆಗೆ 2018ರಲ್ಲಿ ಸಮ್ಮಿಶ್ರ ಸರ್ಕಾರ ಕೊಟ್ಟಿತ್ತು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಹೇಳಿದ್ದಾರೆ. 

ವೋಟರ್‌ ಐಡಿ ಹಗರಣ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಪ್ರತಿ ವಿಷಯಕ್ಕೂ ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರ ಬಾಲಿಶಃ ವರ್ತನೆಯಾಗಿದೆ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಟೂಲ್ಕಿಟ್ನ ಒಂದು ಭಾಗ ಎಂದು ರವಿಕುಮಾರ್ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.


© Copyright 2022, All Rights Reserved Kannada One News