ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

Related Articles

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಕೋಟಿ ಕಂಠ ಕನ್ನಡಗೀತೆ ಗಾಯನದ ಕೇಸರಿ ಮಸಲತ್ತು; ಸ್ವೀಟ್ ಬಾಕ್ಸಲ್ಲಿ ನಾಯಿ ಬಿಸ್ಕತ್ತು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

Updated : 17.11.2022

 ದೇಶದ ವಾರ್ಷಿಕ ಕಬ್ಬಿಣದ ಅದಿರು ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇ.೨೫ ರಷ್ಟಿದೆ.ಅದರಲ್ಲೂ ಬಳ್ಳಾರಿ ಜಿಲ್ಲೆಯದು ಸಿಂಹಪಾಲು.
ಜಿಲ್ಲೆಯೊಂದರಲ್ಲಿಯೆ ೧೨೪ ಅಧಿಕೃತ ಗಣಿಗಾರಿಕಾ ಪ್ರದೇಶಗಳಿವೆ.

ನಾಲ್ಕುನೂರಕ್ಕೂ ಹೆಚ್ಚು ಕಂಪೆನಿಗಳು,ಏಳುನೂರಕ್ಕೂ ಹೆಚ್ಚು ಸರ್ಕಾರಿ ಅಧಿಕಾರಿಗಳನ್ನು ಅಕ್ರಮ ಗಣಿಗಾರಿಕೆಯ ಭಾಗೀದಾರರೆಂದು ಜಸ್ಟೀಸ್ ಸಂತೋಷ್ ಹೆಗ್ಡೆಯವರ ವರದಿಯಲ್ಲಿ ಹೆಸರಿಸಲಾಗಿದೆ.

ಆ ವರದಿಯಲ್ಲಿ,

೧. ಮೈನ್ಸ್  ಅಂಡ್ ಮಿನರಲ್ಸ್ ಡೆವಲಪ್ಮೆಂಟ್ ಅಂಡ್ ರೆಗ್ಯುಲೇಷನ್ ಆಕ್ಟ್- 1957

೨.ಅರಣ್ಯ ಸಂರಕ್ಷಣಾ ಕಾಯಿದೆ- 1980

೩.ಪರಿಸರ ಸಂರಕ್ಷಣಾ ಕಾಯಿದೆ- 1984

೪ ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ- 2006

೫.ಪಂಚಾಯತ್ ರಾಜ್ ಆಕ್ಟ್..

ಮುಂತಾದ ಕಾಯಿದೆಗಳ ಸ್ಪಷ್ಟ ಉಲ್ಲಂಘನೆಯಾಗಿರುವುದನ್ನು  ಹೇಳಿದೆ.
ಕೆಲ ಡಿಪಾರ್ಟುಮೆಂಟುಗಳು ಇದ್ದುವೆನ್ನುವುದೇ ಬಹಳಷ್ಟು ಜನರಿಗೆ ಗೊತ್ತಾಗಲಿಲ್ಲ.ಎಲ್ಲ ಕಾಯಿದೆಗಳಿದ್ದೂ ಇಲ್ಲದಂತಹ ಕಾಲವೊಂದನ್ನು ಅಪವಿತ್ರ ಸಹೋದರರು ಮತ್ತಿತರ ಧಣಿಗಳು  ಸೃಷ್ಟಿಮಾಡಿಬಿಟ್ಟರು.

ಇಷ್ಟಲ್ಲದೆ,ಪೊಲೀಸು, ಗಣಿ ವಿಜ್ಞಾನ ,ಅರಣ್ಯ,ಶಿಕ್ಷಣ,ಕಂದಾಯ,ಕೃಷಿ,ನೀರಾವರಿ,ತೂಕ ಮತ್ತು ಅಳತೆ ಮಾಪನ ಇಲಾಖೆ,ಕಮರ್ಷಿಯಲ್ ಟ್ಯಾಕ್ಸ್,ಕಾರ್ಮಿಕ ಇಲಾಖೆ,ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗಳಂತಹ ಅನೇಕ ಇಲಾಖೆಗಳು ಭ್ರಷ್ಟಾಚಾರದ ಕೂಪದೊಳಗೆ ಬಿದ್ದುಬಿಟ್ಟವು.

 ೨೦೦೩ನೆ ಇಸವಿಯಲ್ಲಿ ಸರ್ಕಾರವೆ ಜಾರಿಗೆ ತಂದ ಕರ್ನಾಟಕ ರಾಜ್ಯ ಮೈನಿಂಗ್ ಪಾಲಿಸಿ -2003 ರಡಿಯಲ್ಲಿ 11620 ಚದರ ಕಿಲೋಮೀಟರಿನಷ್ಟು ವಿಸ್ತಾರದ ಭೂಮಿಯನ್ನು ಖಾಸಗಿಯವರ ಗಣಿ ಆಟಗಳಿಗೆಂದು ರಿ-ಡಿಸರ್ವ್ ಮಾಡಲಾಯಿತು.ಇದಕ್ಕಾಗಿ ಪಕ್ಷಾತೀತ ಬೆಂಬಲವೂ ದೊರೆತಿತ್ತು.

ಶ್ರೀಮಂತ ರೈತರು ಕೃಷಿಯಿಂದ ವಿಮುಖರಾಗಿ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡರು.

ಆ ಹತ್ತು ವರುಷಗಳ ಅವಧಿಯೊಂದರಲ್ಲಿಯೆ ಕರ್ನಾಟಕದ ಜನತೆಯ ಬೆವರಿನ ಶ್ರಮದ ನಾಲ್ಕು ಸಾವಿರ ಕೋಟಿ ರೂಪಾಯಿಗಳ ಮೊತ್ತವು ಸರ್ಕಾರದ ಖಜಾನೆಗೆ ಸೇರದೆ,ಕೆಲವೇ ಕೆಲವು ಗಣಿ ಸಹೋದರರ ಪಾಲಾಯಿತು.

ಕೃಷಿಯಿಂದ ವಿಮುಖರಾಗಿದ್ದ ಬಹುತೇಕರಿಂದಾಗಿ ಬೇಸಾಯದ ಕೆಲಸಗಳನ್ನೆ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿದ್ದ,ಕೃಷಿ ಕೂಲಿಕಾರರು,ಬಡಗಿ,ಕಮ್ಮಾರ,ಕುಂಬಾರರಿಗೆ ಕೆಲಸವಿಲ್ಲದೆ  ಬೀದಿಗೆ ಬಿದ್ದರು.
ಹೀಗೆ ಧುತ್ತನೆ ಬಂದೆರಗಿದ ಅಪಾಯಕ್ಕೆ ಬಲಿಯಾದವರ ಪೈಕಿ ಬಳ್ಳಾರಿ ಜಿಲ್ಲೆಯ ಹೊಸಪೇಟೆ-ಸೊಂಡೂರು ಸುತ್ತಲಿನ ಹಳ್ಳಿಗರ ಸಂಖ್ಯೆಯೇ ಹದಿನೈದು ಸಾವಿರ ದಾಟಿತ್ತು.ಇವರನ್ನು ನಂಬಿದ ಮಕ್ಕಳು,ಮಹಿಳೆಯರನ್ನು ಲೆಕ್ಕ ಹಾಕಿದರೆ  ಭೀಕರತೆಯ ಪ್ರಮಾಣವನ್ನು ಗ್ರಹಿಸಬಹುದು.

ಮಳೆ ಬೀಳುವ ಕಾಲಮಾನಗಳೇ ಬದಲಾದವು.
ಕೃಷಿ ಮಾಡಲಾಗದ  ಸ್ಥಿತಿಗೆ ಭೂಮಿಯನ್ನು ಬಂಜರುಗೊಳಿಸಲಾಯಿತು

ಅಳಿದುಳಿದ ಪ್ರದೇಶವನ್ನೂ ಹಸಿರು ವಲಯದಿಂದ ಮುಕ್ತಗೊಳಿಸಲಾಯಿತು

ಮಣ್ಣು ತನ್ನ ಸತ್ವವನ್ನು ಕಳೆದುಕೊಂಡಿತು

ತುಂಗಭದ್ರಾ ನದಿಯ ಅಣೆಕಟ್ಟಿನ  ನೀರು ಸಂಗ್ರಹದ ಸಾಮರ್ಥ್ಯ 133 ಟಿ.ಎಂ.ಸಿ ಯಿಂದ ಇದ್ದುದು ಗಣಿಗಾರಿಕೆಯ ಪರಿಣಾಮದಿಂದಾಗಿ 99 ಟಿ.ಎಂ.ಸಿ.ಗೆ ಇಳಿಯಿತು.  ಅಧ್ಯಯನವೊಂದರ ಪ್ರಕಾರ ಜಿಲ್ಲೆಯ ಮಾನವ ಅಭಿವೃದ್ಧಿ ಸೂಚ್ಯಂಕ ಪಾತಾಳಕ್ಕೆ ಕುಸಿಯಿತು.

ಲೋಹದದಿರಿನ ಮಣ್ಣಿಂದಾಗಿ ಕುಡಿಯುವ ನೀರು ಸಹ ಮಲಿನವಾಯಿತು.

ಉಸಿರಾಟದ ಸಮಸ್ಯೆಗಳು,ರಕ್ತಹೀನತೆ,ಶ್ವಾಸಕೋಶದ ನಂಜು,ಹೃದಯ ಸಂಬಂಧಿ ಕಾಯಿಲೆಗಳು,ಚರ್ಮರೋಗಗಳು,ಕ್ಯಾನ್ಸರ್ ,ಟೀಬಿಯಂತಹ ಮಾರಣಾಂತಿಕ ರೋಗಗಳೆಲ್ಲ ಜಿಲ್ಲೆಯ ಜನರಿಗೆ ತುಂಬಾ ಸಹಜ ರೋಗಗಳಾಗಿಹೋದವು,!

 ಕಡಿಮೆ ಕೂಲಿಗೆ ಹೆಚ್ಚು ಕೆಲಸ ಮಾಡುವ ಮಹಿಳೆಯರನ್ನು ಗಣಿಗಾರಿಕೆಯ ಕೆಲಸಗಳಲ್ಲಿ ತೊಡಗಿಸಲಾಯಿತು.ಇದರಿಂದಾಗಿ ಕೌಟುಂಬಿಕ ,ಸಾಮಾಜಿಕ ವ್ಯವಸ್ಥೆ ಅಸ್ತವ್ಯಸ್ಥಗೊಳಿಸಲಾಯಿತು.ಮನೆಯೇ ಮೊದಲ ಪಾಠಶಾಲೆ ,ತಾಯಿಯೇ ಮೊದಲ ಗುರು ಎಂಬ ಮಾತುಗಳೂ ಅಬ್ಬರದ ಧೂಳಿನಲ್ಲಿ ಕಾಣದಂತಾಗಿ,ಕೇಳಿಸದಂತಾಗಿ ಹೋದವು.ಹದಿನಾಲ್ಕು ವರುಷದೊಳಗಿನ ಮಕ್ಕಳದೂ ಇದೇ ಕಥೆಯಾಯಿತು.ಮಕ್ಕಳಿಲ್ಲದೆ ಎಷ್ಟೋ ಶಾಲೆಗಳು ಮುಚ್ಚಲ್ಪಟ್ಟವು.

 2005-06ರಲ್ಲಿ 479188 ಹೆಕ್ಟೇರ್‌ ನಷ್ಟಿದ್ದ ಕೃಷಿ ಭೂಮಿ,2009-10 ರಷ್ಟೊತ್ತಿಗೆ 436067 ಹೆಕ್ಟೇರಿಗೆ ಇಳಿದಿತ್ತು. ಅಂದರೆ,ಕೇವಲ ನಾಲ್ಕೈದು ವರ್ಷಗಳ ಅವಧಿಯೊಂದರಲ್ಲಿ 43121 ಹೆಕ್ಟೇರಿನಷ್ಟು ಕೃಷಿಯೋಗ್ಯ ಭೂಮಿಯನ್ನು ಹಾಳುಮಾಡಲಾಗಿತ್ತು!
ಅದೇ ಅವಧಿಯಲ್ಲಿ 2324.80 ಹೆಕ್ಟೇರ್  ನೀರಾವರಿ ಪ್ರದೇಶವಾಗಿದ್ದ ಭೂಮಿಯು,2010-11 ರೆ ಅವಧಿಗಾಗಲೆ 2192.51ಹೆಕ್ಟೇರಿಗೆ ಇಳಿದಿತ್ತು.

ಈ ಭಾಗದ ಸೋಷಿಯೋ-ಇಕಾನಮಿಕ್-
ಅಂಡ್ ಕಲ್ಚರಲ್ ವ್ಯಾಲ್ಯೂಸ್....ಅಂತ ಏನು ಮಾತನಾಡುತ್ತಿದ್ದೆವೋ ಅವೆಲ್ಲವುಗಳೂ ಒಂದು ರೀತಿಯ ಸೈಕಾಲಜಿ ಕಲ್,ಕಲ್ಚರಲ್ ಶಾಕ್ ಗೆ ಒಳಗಾಗಿದ್ದಂತೂ ಸತ್ಯ.
ಅಗೆದಷ್ಟೂ....ನಮ್ಮ ಹೃದಯವನ್ನು ,ನಮಗೆ ನಾವೆ ಬಗೆದುಕೊಂಡಷ್ಟು ನೋವು ಉಂಟಾಗುತ್ತಿದೆ.

              -ಬಿ.ಶ್ರೀನಿವಾಸ

© Copyright 2022, All Rights Reserved Kannada One News