ಕಾಲದ ತಲ್ಲಣಗಳು: ಬಿ.ಶ್ರೀನಿವಾಸ ಅವರ ವಾರದ ಅಂಕಣ

Related Articles

ವಾಟ್ಸಾಪ್ ಯೂನಿವರ್ಸಿಟಿ ಘಟಿಕೋತ್ಸವ ಮತ್ತು ಗಾಂಧೀ ಜಯಂತಿ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ವಿಜ್ಞಾನಿಗಳ ವಿಜ್ಞಾನಿ, ತಥಾಗತ ಬುದ್ಧ: ರಮಾಕಾಂತ ಪುರಾಣಿಕ ಅವರ 27ನೇ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಐದು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಮುಂಜಾನೆಯ ಕೊಲೆ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೀದಿಗೆ ಬಿದ್ದ ಭ್ರಷ್ಟರ ಮಾನ; ಚೀತಾದಿಂದ ಬೆಲೆ ಏರಿಕೆ ನಿಯಂತ್ರಣ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-3: ರಮಾಕಾಂತ ಪುರಾಣಿಕ ಅವರ 26ನೇ ಅಂಕಣ

ನಿಷೇಧವಾಗುತ್ತಾ ಪಿಎಫ್ಐ...?: ಎಡಿಟರ್ ಸ್ಪೆಷಲ್

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ಕಾಲದ ತಲ್ಲಣಗಳು: ಬಿ.ಶ್ರೀನಿವಾಸ ಅವರ ವಾರದ ಅಂಕಣ

Updated : 15.09.2022

ಇಡೀ ಊರಿನ ಶರೀರ ಗಾಯಗೊಂಡಿದೆ ಎಂದು ಹೇಳಿಬಿಟ್ಟರೆ ಸಾಕೆ? ಮನುಷ್ಯನ ನೈತಿಕ ವ್ಯವಸ್ಥೆಯೇ ಕುಸಿದು ಹೋದ ಊರಿನಲ್ಲಿ , ಬಹುಸಂಕೀರ್ಣವಾದ ಅನಿಶ್ಚಿತ ಕಾಲವೊಂದರಲ್ಲಿ ಮನುಷ್ಯ ತನ್ನನ್ನು ತಾನು ಮರುಶೋಧಿಸಿಕೊಳ್ಳಬೇಕಿದೆ.

ಇಂಥಾ ಊರುಗಳಲ್ಲಿ ಈಗ್ಗೆ ಹತ್ತು ವರುಷಗಳ ಹಿಂದೆ ಮನುಷ್ಯರನ್ನು ಯಾವುದೋ ಜಗತ್ತಿನ ಪ್ರಾಣಿಯೆಂಬಂತೆ,ಇಲ್ಲವೇ ಪ್ರದರ್ಶನಕ್ಕಿಟ್ಟ ವಸ್ತುವೆಂಬಂತೆ,ಮತ್ತೊಮ್ಮೆ ಯಂತ್ರಗಳ  ಸ್ಪೇರ್ ಪಾರ್ಟ್ಸ್ ಗಳಂತೆ ಕಂಡಿದ್ದು ಇಡೀ ನಾಗರಿಕ ಸಮುದಾಯಕ್ಕೆ ಎಚ್ಚರಿಕೆಯ ಗಂಟೆಯೂ ಹೌದು.

ಹಿಂಸೆ ನಡೆಯದಂತೆ ನೋಡಿಕೊಳ್ಳಬೇಕಾದ್ದು ಆಯಾ ಪ್ರಭುತ್ವಗಳ ಜವಾಬ್ದಾರಿ.ಕಣ್ಣಿಗೆ ಕಾಣದ ಹಿಂಸೆಗಳು ಸಹ ನಡೆಯದಂತೆ ನೋಡಿಕೊಳ್ಳುವ ಜವಾಬುದಾರಿಯೂ ಅಧಿಕಾರ ಹಿಡಿದ ಸರ್ಕಾರಗಳದ್ದೆ ಆಗಿರುತ್ತದೆ. ಆದರೆ,ಸಂವೇದನಾಶೀಲ ಸಮಾಜವೊಂದನ್ನು ರೂಪಿಸುವ ನಿಟ್ಟಿನಲ್ಲಿ ಭಾಗಿಯಾಗುವ ಸರ್ಕಾರಗಳಿಗೆ ಸೂಕ್ಷ್ಮತೆ,ಸಂವೇದನೆಗಳಿಲ್ಲದೇ ಹೋದರೆ ಅಥವಾ ಅಕ್ರಮ,ಅನೈತಿಕ ಗಣಿಗಾರಿಕೆಯಲ್ಲಿ ಪ್ರಭುತ್ವಗಳೇ ಭಾಗಿಯಾದ ಹೊತ್ತಲ್ಲಿ ಮನುಷ್ಯರ ಬದುಕಿಗೆ ಅರ್ಥವೇ ಇರುವುದಿಲ್ಲ.

ಬೆಟ್ಟದ ತುದಿಗಳಲ್ಲಿ ಬಹುತೇಕ ಗಣಿಗಳ ಪ್ಲಾಂಟ್ ಗಳಿರುತ್ತವೆ.ಯಾಕೆಂದರೆ ಹೈಗ್ರೇಡ್ ಅದಿರಿನ ನಿಕ್ಷೇಪಗಳು ಅಲ್ಲಿಂದಲೇ ಪ್ರಾರಂಭ.ಅಲ್ಲಿಯವರೆಗೂ ಹಾವು ಸುತ್ತು ಹಾಕುವ ರೀತಿಯಲ್ಲಿರುವ ಮಣ್ಣಿನ ದಾರಿಯಲ್ಲಿ ತನ್ನದೇ ಯಮ ಭಾರದ ಜೊತೆಗೆ ಟನ್ನುಗಟ್ಟಲೇ ಭಾರ ಹೊತ್ತ ಟಿಪ್ಪರುಗಳು ಹಲವಾರು ಬಾರಿ ಹತ್ತಿ ಇಳಿಯುತ್ತವೆ.ಕೂಲಿ ಕಾರ್ಮಿಕರು ಗಂಡು-ಹೆಣ್ಣು ಗಳೆಂಬ ಬೇಧಗಳಿಲ್ಲದೇ ತಿಂಗಳುಗಟ್ಟಲೆ ಅಲ್ಲಿಯೆ ಉಳಿದುಕೊಳ್ಳಬೇಕಾಗುತ್ತದೆ.
ಕಬ್ಬಿಣದ ದೊಡ್ಡ ತೆರೆದ ಕಂಟೇನರುಗಳಲ್ಲಿಯೆ ಅವರ ವಾಸ.ಹೀಗೆ ಬದುಕುವ ಅವರಿಗೆ ಹಗಲು ರಾತ್ರಿಗಳ ವ್ಯತ್ಯಾಸಗಳಿರುವುದಿಲ್ಲ.

ಎತ್ತ ನೋಡಿದರೂ ಕೆಂಧೂಳು!,ಕಲ್ಲು,ಮಣ್ಣು. ಮೇಲೆ ನೋಡಿದರೆಷ್ಟೆ ಖಾಲಿ ಆಕಾಶ.ನಿದಿರೆ,ಊಟದಷ್ಟೆ ಮೈಥುನಗಳೂ ಕೂಡ ಇಲ್ಲಿ ಸಹಜ ಸಾಮಾನ್ಯ ವಿಷಯವಾಗಿದೆ.

ಹೊರಜಗತ್ತಿನ ಸಂಪರ್ಕವೇ ತಪ್ಪಿಹೋದ ಇಂಥಾ ತುತ್ತತುದಿಯಲ್ಲಿ ವಾಸಿಸುವ ಗಂಡು-ಹೆಣ್ಣುಗಳ ಸುರತ  ಕ್ರಿಯೆಗಳೂ ಸಾಮಾನ್ಯವಾಗಿದೆ.
ಪ್ರೀತಿಯೂ ಅಲ್ಲದ,ಲೈಂಗಿಕ ಆಕರ್ಷಣೆಯೂ ಇಲ್ಲದೆ,ನಿರ್ಭಾವುಕ ಪ್ರಪಂಚದಲ್ಲಿ ಗಂಡು ಹೆಣ್ಣುಗಳಿಬ್ಬರಿಗೂ "ಯಾರು ನೋಡಿದರೇನು?"ಎಂಬ ಭಾವದಲ್ಲಿ ಯಾಂತ್ರಿಕ ಸಂಭೋಗ ಕ್ರಿಯೆ ಮುಂದುವರೆಸುತ್ತಿದ್ದರು.

ಹೊರ ಜಗತ್ತಿನ ಸಂಪರ್ಕವೇ ತಪ್ಪಿಹೋದವರಂತೆ ವರ್ತಿಸುವರು!
ಕ್ರಿಯೆ ನಡೆದಿದೆ.
ಸುರತ ಸಾಗಿದೆ.
ಇನ್ನೇನು ಸ್ಖಲಿಸಬೇಕಷ್ಟೆ!.
ನಂತರದ ಶಿಪ್ಟಿಗೆಂದು  ಕೆಲಸಕ್ಕೆ ಬಂದವರ ಕಣ್ಣ ಎದುರಿಗೇ ನಡೆಯುತ್ತಿದ್ದರೂ ಏನೂ ಪ್ರತಿಕ್ರಿಯಿಸದ ಭಾವ!
ಅಬ್ಬಾ...ಎಂಥಾ ಸ್ಥಿತಿ!

ಹೌದು,
ಊರು ಗಾಯಗೊಂಡಿದೆ.
ಸಾಂಸ್ಕೃತಿಕ ಶರೀರ ಗಾಯಗೊಂಡಿದೆ.
ಇಷ್ಟು ಹೇಳಿದರೆ ಸಾಕೆ?
ಮನುಷ್ಯನ ನರನಾಡಿಗಳ ಸೂಕ್ಷ್ಮ ಭಾವತಂತುಗಳನ್ನೂ ಕಸಿದ ಗಣಿಗಾರಿಕೆಯ ಆಧುನಿಕತೆಗೆ ಏನೆಂದು ಕರೆಯುವುದು?
ಹೇಳಿ,ರೋಗಪೀಡಿತ ಜೀವನಕ್ರಮಕ್ಕೆ ಏನಂತ ಕರೆಯಲಿ?
ನಾವು ಬದುಕುತ್ತಿರುವ ಜಗತ್ತಿನಲ್ಲಿ,ಸಮಾಜವೊಂದನ್ನು ನೋಡುವ ಶಕ್ತಿಯನ್ನು ಕಳೆದುಕೊಂಡ ಮನುಷ್ಯರನ್ನು,ಸಂಬಂಧಗಳನ್ನೂ  ಮರುಶೋಧಿಸಬೇಕಿದೆ.

                       -ಬಿ.ಶ್ರೀನಿವಾಸ

© Copyright 2022, All Rights Reserved Kannada One News