ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಕಾಂಗ್ರೆಸ್​ನಿಂದ ಕಲಿಬೇಕಿಲ್ಲ: ಸಚಿವ ಬಿ.ಸಿ. ಪಾಟೀಲ್

Related Articles

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಿಲ್ಲ: ಅಶೋಕ್ ಗೆಹ್ಲೋಟ್

ಎರಡು ರೀತಿಯ ಸಾಹಿತಿಗಳು ಇದ್ದಾರೆ: ಸಿಎಂ ಬೊಮ್ಮಾಯಿ‌

ದಸರಾ ಕ್ರೀಡಾಪಟುಗಳಿಗೆ ವಸತಿ ನೀಡಲು ಯೋಗ್ಯತೆ ಇಲ್ಲವೇ? : ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

SDPI ನಿಷೇಧದ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಸಿಎಂ ಬೊಮ್ಮಾಯಿ

ಪಿಎಫ್ಐ ಸಿದ್ದರಾಮಯ್ಯರ ಪಾಪದ ಕೂಸು: ಯಡಿಯೂರಪ್ಪ

ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಚುನಾವಣೆ: ನಾಮಪತ್ರ ಸ್ವೀಕರಿಸಿದ ದಿಗ್ವಿಜಯ್ ಸಿಂಗ್

‘ರೂಟ್ ಮಾರ್ಚ್’ ಗೆ ಆರೆಸ್ಸೆಸ್ ಮನವಿ : ಅನುಮತಿ ನಿರಾಕರಿಸಿದ ತಮಿಳುನಾಡು ಸರ್ಕಾರ

ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್

ದೇಶದಲ್ಲಿ ಮೊದಲು ಕಾಂಗ್ರೆಸ್ ಪಕ್ಷವನ್ನು ನಿಷೇಧ ಮಾಡಬೇಕು: ನಳಿನ್ ಕುಮಾರ್ ಕಟೀಲ್

ಶಿವಮೊಗ್ಗ : ಎಸ್ ಡಿಪಿಐ ಕಚೇರಿ, ಮುಖಂಡರ ಮನೆಗಳ ಮೇಲೆ ಪೊಲೀಸ್ ದಾಳಿ

ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಕಾಂಗ್ರೆಸ್​ನಿಂದ ಕಲಿಬೇಕಿಲ್ಲ: ಸಚಿವ ಬಿ.ಸಿ. ಪಾಟೀಲ್

Updated : 15.08.2022

ಚಿತ್ರದುರ್ಗ: ರಾಜ್ಯ  ಸರಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವ(Azadi Ka Amrit Mahotsav) ಅಂಗವಾಗಿ ಆಗಸ್ಟ್ 14ರಂದು  ಕನ್ನಡದ ದಿನಪತ್ರಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸಾವರ್ಕರ್(Savarkar) ಪೋಟೋ ಸೇರಿಸಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ(Jawaharlal Nehru) ಅವರನ್ನು ಕೈಬಿಟ್ಟಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಬಗ್ಗೆ ಕೃಷಿ ಸಚಿವ ಬಿ. ಸಿ. ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. 

ಚಿತ್ರದುರ್ಗದಲ್ಲಿ ಸದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಆರಂಭದಲ್ಲಿ 'ನಾನು ಜಾಹೀರಾತನ್ನು ನೋಡಿಲ್ಲ, ಆದ್ದರಿಂದ ನನಗೆ ಅದರ ಬಗ್ಗೆ ಗೊತ್ತಿಲ್ಲ. ವಾರ್ತಾ ಇಲಾಖೆಗೆ ಈ ಪ್ರಶ್ನೆ ಕೇಳಬೇಕು' ಎಂದು ಹೇಳಿದ್ದಾರೆ.  ಬಳಿಕ ನೆಹರೂ ಫೋಟೊ ಹಾಕಬೇಕಾಗಿತ್ತೋ ಅಥವಾ ಕೈ ಬಿಟ್ಟಿದ್ದು ಸರಿಯಾ? ಎಂದು ಪತ್ರಕರ್ತರು ಪ್ರಶ್ನಿಸಿದಾಗ ಹಾಕಬೇಕಾಗಿತ್ತು ಎಂದು ಹೇಳಿದ್ದಾರೆ. 

'ಹರ್ ಘರ್ ತಿರಂಗಾ' ಅಭಿಯಾನದ ಅಂಗವಾಗಿ ರಾಜ್ಯದಲ್ಲಿ  1 ಕೋಟಿ, 10 ಲಕ್ಷ ತ್ರಿವರ್ಣ ಧ್ವಜವನ್ನು ಸರಕಾರವೇ ವಿತರಣೆ ಮಾಡಿದೆ. ಇದು ಬಿಜೆಪಿ ಸರಕಾರದ್ದು. ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಕಾಂಗ್ರೆಸ್​ನಿಂದ ಕಲಿಬೇಕಿಲ್ಲ' ಎಂದು ಇದೇ ವೇಳೆ ಕಿಡಿಗಾರಿದರು.

ಸರ್ಕಾರ ನಡೀತಿಲ್ಲ, ಮ್ಯಾನೇಜ್ ಮಾಡ್ತಿದೀವಿ ಎಂಬ ಸಚಿವ ಮಾಧುಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿ. ಸಿ. ಪಾಟೀಲ್, 'ಮಾಧುಸ್ವಾಮಿ ನಾಲಿಗೆ ನಾನಲ್ಲ, ನಾವು ಸರ್ಕಾರ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನಡೆಸುತ್ತಾ ಇದ್ದಾರೆ' ಎಂದು ಹೇಳಿದರು.

© Copyright 2022, All Rights Reserved Kannada One News