ಲಂಚ ಪಡೆದಾದರೂ ಕೆಲಸ ಕೊಡಿಎನ್ನುವ ಉದ್ಯೋಗಾಕಾಂಕ್ಷಿಗಳ ಗೋಳು ಕೇಳಿ: ಕಾಂಗ್ರೆಸ್

Related Articles

ಪರೇಶ್ ಮೇಸ್ತ ಪ್ರಕರಣ| ಬಿಜೆಪಿಗರೇ ಜನರೆದುರು ಕ್ಷಮೆ ಕೇಳುವ ಮುಖ ಇದ್ಯಾ: ಬಿ.ಕೆ.ಹರಿಪ್ರಸಾದ್

ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.6ರಿಂದ 10ಕ್ಕೇರಿಸಿದ ತೆಲಂಗಾಣ ಸರ್ಕಾರ

ಅಡ್ಡ ಮತದಾನ: ಜೆಡಿಎಸ್‌ನ ಇಬ್ಬರು ಶಾಸಕರಿಗೆ ನೋಟಿಸ್‌

ಪರೇಶ್ ಮೇಸ್ತಾ ಕುರಿತ CBI ವರದಿ ಬಿಜೆಪಿ ಮುಖಕ್ಕೆ ಬಡಿದ ತಪರಾಕಿ: ಸಿದ್ದರಾಮಯ್ಯ

ಅಧ್ಯಕ್ಷೀಯ ಚುನಾವಣೆಗೆ ಕಾಂಗ್ರೆಸ್‌ನಿಂದ ಮಾರ್ಗಸೂಚಿ ಬಿಡುಗಡೆ

SDPI ಯನ್ನು ನಿಷೇಧಿಸಲು ಪೂರಕವಾದ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ: ಚುನಾವಣಾ ಆಯೋಗ

ಎರಡಕ್ಕಿಂತ ಅಧಿಕ ಮಕ್ಕಳಿರುವವರು ಪಾಕಿಸ್ತಾನಕ್ಕೆ ಹೋಗಲಿ: ಯತ್ನಾಳ ವಿವಾದಾತ್ಮಕ ಹೇಳಿಕೆ

ರಾಹುಲ್ ಗಾಂಧಿ ಭದ್ರತೆಗೆ ಒಂದು ಹಗ್ಗ ಕೊಡಿಸಲೂ ಈ ಸರ್ಕಾರಕ್ಕೆ ಗತಿ ಇಲ್ಲವಾ?: ಬಿಜೆಪಿ ವಿರುದ್ಧ ಖರ್ಗೆ ಆಕ್ರೋಶ

ಮಹಾ ಸಿಎಂ ಶಿಂದೆಗೆ ಬೆದರಿಕೆ ಹಾಕಿದ್ದ ವ್ಯಕ್ತಿ ಬಂಧನ: ಫಡಣವೀಸ್

ಅಕ್ರಮ ಅಕ್ಕಿ ಸಾಗಾಟ ಪ್ರಕರಣ: ಬಿಜೆಪಿ ಮುಖಂಡ ಗಡಿಪಾರು

ಲಂಚ ಪಡೆದಾದರೂ ಕೆಲಸ ಕೊಡಿಎನ್ನುವ ಉದ್ಯೋಗಾಕಾಂಕ್ಷಿಗಳ ಗೋಳು ಕೇಳಿ: ಕಾಂಗ್ರೆಸ್

Updated : 20.09.2022

ಬೆಂಗಳೂರು: ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನಾನಿರತ ಉದ್ಯೋಗಾಕಾಂಕ್ಷಿಗಳು 'ಲಂಚ ತೆಗೆದುಕೊಳ್ಳಿ ಕೆಲಸ ಕೊಡಿ' ಎಂದು ಪತ್ರ ಬರೆದು, ಘೋಷಣೆಗಳನ್ನು ಕೂಗುವ ಮೂಲಕ ಕೆಲಸಕ್ಕಾಗಿ ಬೇಡಿಕೆ ಇಟ್ಟಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, #40PercentSarkara ಟ್ಯಾಗ್‌ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಪಿಎಸ್‌ಐ ನೇಮಕಾತಿ ಹಗರಣದಿಂದಾಗಿ ಸಾಕಷ್ಟು ಜನರ ಬದುಕು ಅತಂತ್ರವಾಗಿದೆ ಎಂದಿರುವ ಕಾಂಗ್ರೆಸ್‌, 'ಉದ್ಯೋಗಾಕಾಂಕ್ಷಿಗಳ ಬಳಿ ಪುಸ್ತಕ, ಪೆನ್ನು, ಭವಿಷ್ಯದ ಕನಸು ಬಿಟ್ಟರೆ ಬೇರೇನೂ ಇಲ್ಲ. ಸರ್ಕಾರಕ್ಕೆ ಲಂಚದ ಆಸೆ, ಕಮಿಷನ್ ಲಾಲಸೆ ಬಿಟ್ಟರೆ ಬೇರೇನೂ ಇಲ್ಲ. 40 ಪರ್ಸೆಂಟ್ ಕಮಿಷನ್‌ ಸರ್ಕಾರ ನಡೆಸಿದ ಪಿಎಸ್‌ಐ ಅಕ್ರಮದಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳ ವಯಸ್ಸು ಮೀರುತ್ತಿದೆ. ಬದುಕು ಛಿದ್ರವಾಗಿದೆ. ಇವರ ಅತಂತ್ರ ಬದುಕಿಗೆ ಪರಿಹಾರವೇನು ಬಸವರಾಜ ಬೊಮ್ಮಾಯಿಯವರೇ?' ಎಂದು ಕೇಳಿದೆ.

ಉದ್ಯೋಗಾಕಾಂಕ್ಷಿಗಳ ಬಳಿ ಪುಸ್ತಕ, ಪೆನ್ನು, ಭವಿಷ್ಯದ ಕನಸು ಬಿಟ್ಟರೆ ಬೇರೇನೂ ಇಲ್ಲ.
ಸರ್ಕಾರಕ್ಕೆ ಲಂಚದ ಆಸೆ, ಕಮಿಷನ್ ಲಾಲಸೆ ಬಿಟ್ಟರೆ ಬೇರೇನೂ ಇಲ್ಲ.#40PercentSarkara ನಡೆಸಿದ PSI ಅಕ್ರಮದಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳ ವಯಸ್ಸು ಮೀರುತ್ತಿದೆ, ಬದುಕು ಛಿದ್ರವಾಗಿದೆ.


© Copyright 2022, All Rights Reserved Kannada One News