ಮೋದಿ ಅಧಿಕಾರದಲ್ಲಿ.. ಹಿಂದೂಗಳು ಜೈಲಲ್ಲಿ...!: ಎಡಿಟರ್‌ ಸ್ಪೆಶಲ್

ಮೋದಿ ಅಧಿಕಾರದಲ್ಲಿ.. ಹಿಂದೂಗಳು ಜೈಲಲ್ಲಿ...!: ಎಡಿಟರ್‌ ಸ್ಪೆಶಲ್

Updated : 09.09.2022

 ಡಿಯರ್ ಹಿಂದೂಗಳೇ ಮೊದಲಿಗೇ ಹೇಳಿಬಿಡ್ತೀನಿ... ಮೋದಿಯವರ ಮಾತನ್ನು ನಂಬಿಕೊಂಡು, ಅವರ ಹಿಂಬಾಲಕರು ಮಾಡುತ್ತಿರುವ ಅವಾಂತರಗಳನ್ನು ಬೆಂಬಲಿಸುವ ಭರದಲ್ಲಿ ಜೈಲುಪಾಲಾಗದಿರಿ... ಯಾಕೆ ಹೀಗೆ ಹೇಳ್ತಿದ್ದೀನಿ ಅಂದುಕೊಂಡ್ರ? ಏನೋ ಪವಾಡ ಮಾಡಿಬಿಡ್ತೀನಿ... 15 ಲಕ್ಷ ಎಲ್ಲರ ಅಕೌಂಟಿಗೆ ಹಾಕ್ತೀನಿ, ಲೋಕಪಾಲ್ ಮಸೂದೆ ತಂದು ಎಲ್ಲವನ್ನೂ ತೆರಿಗೆ ಮುಕ್ತ ಮಾಡ್ತೀನಿ.. ಮಲೇಶಿಯಾ ದೇಶದ ಥರ ಭಾರತೀಯರು ಟ್ಯಾಕ್ಸೇ ಕಟ್ಟಂಗಿಲ್ಲ ಹಾಗ್ ಮಾಡ್ತೀನಿ, ಪೆಟ್ರೋಲ್ ಬೆಲೆ 30 ರೂಪಾಯಿ ಮಾಡ್ತೀನಿ, ಡಾಲರ್ ಬೆಲೆ ರೂಪಾಯಿಗೆ ಸಮ ಮಾಡ್ತೀನಿ, ಬುಲೆಟ್ ಟ್ರೈನ್ ತರ್ತೀನಿ, ಭಾರತದ ರಸ್ತೆಗಳನ್ನು ಚಿನ್ನದ ರಸ್ತೆ ಮಾಡಿಬಿಡ್ತೀನಿ, ಭಿಕ್ಷೆ ಬೇಡುವವನೂ ಫ್ಲೈಟಲ್ಲಿ ಓಡಾಡುವಂತೆ ಮಾಡ್ತೀನಿ... ಹಾಗ್ ಮಾಡ್ತೀನಿ, ಹೀಗ್ ಮಾಡ್ತೀನಿ... ಕಡಿದು ಕಟ್ಟೆ ಹಾಕ್ತೀನಿ... ಅಂತ ಅಧಿಕಾರಕ್ಕೆ ಬಂದ ಮೋದಿಯವರು ಈ ದೇಶಕ್ಕೆ ಕೊಟ್ಟ ಕೊಡುಗೆಯಾದರೂ ಏನು ಸ್ವಾಮಿ? ಪ್ರಾಮಿಸ್ ಮಾಡಿ ಓಟ್ ಕಿತ್ತು... ಇವಾಗ ಎಲ್ಲರಿಗೂ ಉಲ್ಟಾ ಹೊಡೀತಿದ್ದಾರಲ್ಲ ಯಾಕೆ?

ಅಲ್ರೀ ಅಷ್ಟೆಲ್ಲಾ ಪ್ರಾಮೀಸ್ ಮಾಡಿ ಅಧಿಕಾರದ ಗದ್ದುಗೆ ಏರಿದ ಮನುಷ್ಯ ಮಾಡಿದ್ದಾದರೂ ಏನನ್ನು? ನೋಟ್ ಬ್ಯಾನ್ ಮಾಡಿ, ಜಿಎಸ್ಟಿ ತಂದು ದೇಶದ ಲಕ್ಷಾಂತರ ಉದ್ಯಮಗಳನ್ನು ಮುಳುಗಿಸಿದ ಸಾಧನೆಯನ್ನು ಮರೆಯೋದುಂಟೆ? ಬರೀ ಉದ್ಯಮಗಳಷ್ಟೇ ಅಲ್ಲ, ಸಣ್ಣಪುಟ್ಟ ಕೈಗಾರಿಕೆಗಳೂ ಸೇರಿದಂತೆ, ದೊಡ್ಡ ದೊಡ್ಡ ಬ್ಯಾಂಕುಗಳೇ ಮುಳುಗಡೆಯಾಗಿಬಿಟ್ಟವಲ್ಲ... ಅದೂ ಕರ್ನಾಟಕದ ಹೆಮ್ಮೆಯ ಬ್ಯಾಂಕುಗಳನ್ನು, ಅವು ಲಾಭದಲ್ಲಿದ್ರೂ, ಸೋತು ಸುಣ್ಣವಾಗಿರೋ ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನ ಅಂತ ಮಾಡಿದ್ದು ಯಾವ ನ್ಯಾಯ ಹೇಳಿ? ಉದ್ಯಮಗಳು, ಕೈಗಾರಿಕೆಗಳು, ಬ್ಯಾಂಕುಗಳು ಮುಳುಗಿದ ಮೇಲೆ ಯುವಕರಿಗೆ ಉದ್ಯೋಗ ಎಲ್ಲಿಂದ ಸಿಗುತ್ತದೆ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡುತ್ತೇನೆಂದವರು ಈಗ ವರ್ಷಕ್ಕೆ 3 ಕೋಟಿ ಉದ್ಯೋಗ ಕಡಿತ ಮಾಡ್ತಿದ್ದಾರೆ... ಏನ್ ಕರ್ಮಾ ರೀ ಇದು?

2002 ರಿಂದ ರಕ್ತಸಿಕ್ತ ರಾಜಕೀಯಕ್ಕೆ ನಾಂದಿ ಹಾಡಿ, ಅಧಿಕಾರದ ಗದ್ದುಗೆ ಹಿಡಿದ ಮೋದಿಯವರು, 2013ರಲ್ಲಿ ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದು, ಚುನಾವಣಾ ಪ್ರಚಾರದಲ್ಲಿ ಮೈಕ್ ಸಿಕ್ಕರೆ ಸಾಕು, ʼಕಾಂಗ್ರೆಸ್ 60 ವರ್ಷದಲ್ಲಿ ಏನ್ ಮಾಡ್ತು?ʼ ಅಂತಲೇ ಮಾತನಾಡುತ್ತಿದ್ದದ್ದು, ಇಲ್ಲಿಯವರೆಗೆ ಅಂದ್ರೆ ತಾವು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಈ ಎಂಟು ವರ್ಷಗಳಲ್ಲಿ ಒಂದೇ ಒಂದು ಪ್ರೆಸ್ ಮೀಟ್ ಮಾಡದೇ ಇದ್ದದ್ದು, ಅಥವಾ ಈ ಎಂಟು ವರ್ಷಗಳಲ್ಲಿ ತಾವು, ತಮ್ಮ ಸರ್ಕಾರ ಏನ್ ಮಾಡಿದ್ದೀವಿ ಅಂತ ಹೇಳಿಕೊಂಡಿದ್ದು, ಏನಾದರೂ ಇದೆಯಾ? ಇದ್ಯಾವುದಕ್ಕಾದರೂ ದಾಖಲೆ ಇದೆಯ? ಅಲ್ರೀ ಈ ಮನುಷ್ಯ ಪತ್ರಕರ್ತರಿಗೆ, ಅವರು ಕೇಳುವ ಅಭಿವೃದ್ಧಿ ಕುರಿತ ಪ್ರಶ್ನೆಗಳಿಗೆ ಭಯ ಪಡೋದಾದರೂ ಯಾಕೆ ಅಂತ..? ಅಷ್ಟೊಂದು ಪುಕ್ಕಲರಾದ ಇವರನ್ನು 56 ಇಂಚಿನ ವಿಶ್ವಗುರು ಅಂತ ಪ್ರಚಾರ ಮಾಡಿದವರಿಗೆ ನಾಚಿಕೆ ಮಾನ ಮರ್ಯಾದೆ ಅನ್ನೋದಾದರೂ ಇದೆಯಾ ಅಂತ? ಇದೆಲ್ಲಾ ಒಂದು ಕಡೆಗಾದರೆ, ಧರ್ಮವನ್ನು ರಾಜಕೀಯದ ಗುರಾಣಿಯಾಗಿ ಬಳಸಿಕೊಂಡು ಸರ್ವಾಧಿಕಾರತ್ವಕ್ಕೆ ಮುಂದಾದ ಇವರು, ತಮ್ಮ ಅಘೋಷಿತ ಸರ್ವಾಧಿಕಾರದಿಂದ ದೇಶದಲ್ಲಿ ಬೇರೆಯೇ ತೆರನಾದ ಜನಾಂಗೀಯ ದ್ವೇಷಕ್ಕೆ ಮುನ್ನುಡಿ ಬರೆದುಬಿಟ್ರಲ್ಲ..? ತನ್ನನ್ನು ಪ್ರಶ್ನಿಸುವ ಪಕ್ಷಗಳ ಮೇಲೆ, ಅದರ ನಾಯಕರ ಮೇಲೆ ಇಡಿ, ಸಿಬಿಐ, ಎನ್ಐಎ ಛೂ ಬಿಡೋದೇನಾ ಇವರ ಕೆಲಸ?

ಬಹುಶಃ ಮೋದಿಯವರನ್ನು ಇಷ್ಟಪಡುವ ಸಾಫ್ಟ್ ಹಿಂದೂಗಳೂ ಕೂಡಾ ಮೋದಿಯವರ ಆಡಳಿತದಲ್ಲಿ ಇಂತಹದ್ದೊಂದು ಜನಾಂಗೀಯ ದ್ವೇಷ ಎಗ್ಗಿಲ್ಲದೇ ತಾಂಡವವಾಡುತ್ತದೆ ಅನ್ನೋದನ್ನ ಖಂಡಿತವಾಗಿಯೂ ಊಹಿಸಿರಲಿಕ್ಕಿಲ್ಲ. ಅವರೇ ಶಾಕ್ ಆಗುವಷ್ಟರ ಮಟ್ಟಿಗೆ ಭಾರತವನ್ನು, ಅದರೊಳಗೆ ನೆಮ್ಮದಿಯಿಂದ ಬದುಕುತ್ತಿದ್ದ ಭಾರತೀಯರನ್ನು ದ್ವೇಷದ ಕುಲುಮೆಯಲ್ಲಿ ಬೆಂದು ಹೋಗುವಂತ ಮಾಡಿಯೇಬಿಟ್ಟರು. ಹಾಗೆಯೇ, ಈ ಭಾರತದ 8 ವರ್ಷಗಳ ದಾರುಣ ಇತಿಹಾಸವನ್ನು ಅದು ನಡೆದು ಬಂದ ಹಾದಿಯನ್ನು ನೆನೆಸಿಕೊಂಡರೆ ಮನುಷ್ಯರಾದವರಿಗೆ ಎದೆ ನಡುಗುತ್ತದೆ. ಯಾಕೆಂದರೆ, ಹೆಜ್ಜೆ ಇಟ್ಟ ನೆಲವೆಲ್ಲ ರಕ್ತವಲ್ರೀ..? ಕಣ್ಣು ಹಾಯಿಸಿದ ಕಡೆಗೆಲ್ಲಾ ರಕ್ತಸಿಕ್ತ ಚಿತ್ರಗಳು ಎದ್ದು ನಿಂತು ಇಲ್ಲಿಯ ಮನುಷ್ಯತ್ವವನ್ನು ಅಣಕಿಸುತ್ತಿವೆ.. ಅಲ್ವ? ಅದೆಷ್ಟೋ ಬಡವರ ಬಾಳಿ ಬದುಕಿದ ಮನೆಗಳು - ಗೂಡುಗಳು ಧ್ವಂಸಗೊಂಡು ಧೂಳಿಪಟವಾಗಿಬಿಟ್ಟವು... ದ್ವೇಷದ ಕುಲುಮೆಯಲ್ಲಿ ಬೆಂದ ಜೀವಗಳು, ನರಳುವ ಒಡಲುಗಳು… ಅಬ್ಬಬ್ಬಾ ಈ ನೆಲದಲ್ಲಿ ಜರುಗುತ್ತಲೇ ಇರುವ ರಕ್ತಪಿಪಾಸು ಪ್ರಭುತ್ವಕ್ಕೆ ನಲುಗಿದ ಆ ಸಂತ್ರಸ್ಥರ ನರಕ ಸಂಕಟವನ್ನು ನೆನಸಿಕೊಂಡಾಗಲೆಲ್ಲ ಎದೆ ನಡುಗುತ್ತದೆ. ಸಂಕಟವಾಗುತ್ತದೆ. ಅಯ್ಯೋ ಎಂಬ ಆಕ್ರಂಧನಗಳು ಕೇಳಿ ಬರುತ್ತಲೇ ಇವೆ... ಇದು ಮೋದಿಯವರು ತಮ್ಮ ಭಕ್ತರನ್ನು ಯಾಮಾರಿಸಲು ಕೊಡುವ ಕೋಮುವಾದದ ಡೋಸ್ ಆದ್ರೆ, ಅಸಲಿಗೆ, ಇನ್ನೂ ತಮ್ಮ ಭಕ್ತರನ್ನು ಯಾಮಾರಿಸಿದ ಓವರ್ ಡೋಸ್ಗಳ ರೀತಿಯೇ ಬೇರೆ.

2013ರಲ್ಲಿ ʼಕಾಂಗ್ರೆಸ್ 60 ವರ್ಷದಲ್ಲಿ ಏನ್ ಮಾಡ್ತು?ʼ ಅಂತ ಕೇಳುತ್ತಲೆ ಅಧಿಕಾರಕ್ಕೆ ಬಂದ ಮೋದಿಜಿಯವರೇ, ನೀವು ಎಂಟು ವರ್ಷದಲ್ಲಿ ಏನ್ ಮಾಡಿದ್ರೀ? ಅಂತ ಕೇಳುವ ಮೋದಿಜಿಯವರ ಪರಮ ಭಕ್ತರು ಈ ದೇಶದಲ್ಲಿ ಇಲ್ಲವೇ ಇಲ್ಲ. ಯಾಕಂದ್ರೆ ಅವರೆಲ್ಲ ತಮ್ಮ ಮಿದುಳನ್ನು ಕೋಮುವಾದದ ನಶೆಗೆ ಅಕ್ಷರಶಃ ಅಡವಿಟ್ಟಿದ್ದಾರೆ. ಅವರು ಎಂಥ ನಶೆಯಲ್ಲಿ ತೇಲಾಡುತ್ತಾ ವಿಕೃತವಾಗಿ ಜೀವಿಸುತ್ತಿದ್ದಾರೆಂದರೆ, ಅವರಿಗೆ ಉಣ್ಣಲು ಒಂದು ತುತ್ತು ಕೂಳು ಸಿಗದಿದ್ದರೂ ಪರವಾಗಿಲ್ಲ, ಮುಸ್ಲಿಮರು ಮಾತ್ರ ಮಸೀದಿಗಳಲ್ಲಿ ಆಜಾನ್ ಕೂಗುವಂತಿಲ್ಲ. ತಿಂಗಳ ಕರೆನ್ಸಿಗಾಗಿ ಅಪ್ಪನ ಬಳಿ ನಾಚಿಕೆ ಬಿಟ್ಟು ದುಡ್ಡು ಕೇಳಿದರೂ ಪರ್ವಾಗಿಲ್ಲ, ಹಲಾಲ್ ಪದ್ದತಿಯಲ್ಲಿ ಪ್ರಾಣಿಗಳನ್ನು ಕತ್ತರಿಸಿಬಾರದು. ತಮಗೆ ಸರ್ಕಾರಿ ಉದ್ಯೋಗ ಸಿಗದಿದ್ದರೂ ಪರ್ವಾಗಿಲ್ಲ, ಮುಸ್ಲಿಂ ಹೆಣ್ಣು ಮಕ್ಕಳು ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರಂಗಿಲ್ಲ. ಇದು ಮೋದಿ ಭಕ್ತರ ವರಸೆಗಳ ಸ್ಯಾಂಪಲ್... ನಮಗೆ ಪಕೋಡಾ ಮಾರಿ ಅಂತ ಹೇಳುವುದನ್ನು ಬಿಟ್ಟು, ಸರ್ಕಾರಿ ಉದ್ಯೋಗ ಕೊಡಿ ಮೋದಿಜಿ, 182 ಅಡಿ ಎತ್ತರದ ಮೂರ್ತಿ ನಿರ್ಮಿಸಿ ಹಣ, ಶ್ರಮ ವ್ಯರ್ಥ ಮಾಡುವ ಬದಲು, ನಮಗೆ ಓದಲಿಕ್ಕೆ ಗ್ರಂಥಾಲಯ ಕಟ್ಟಿಕೊಡಿ ಮೋದಿಜಿ, ಮಹಿಳೆಯರ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಅಂತ ಕೆಂಪು ಕೋಟೆ ಮೇಲೆ ನಿಂತು ಜಂಭ ಕೊಚ್ಚಿಕೊಂಡು ಅವತ್ತೇ ರೇಪಿಸ್ಟ್ಗಳನ್ನು ಯಾಕ್ ಬಿಡುಗಡೆ ಮಾಡಿದ್ರಿ ಮೋದಿಜಿ, ಒಟ್ಟಾರೆ ಈ ಎಂಟು ವರ್ಷದಲ್ಲಿ ನಿಮ್ಮಿಂದಾದ ಅಭಿವೃದ್ಧಿ ಎಷ್ಟು ಮೋದಿಜಿ? ಅಂತ ಕೇಳೋಕೆ ಈ ದೇಶದಲ್ಲಿನ ಒಬ್ಬ ಅಂಧ ಭಕ್ತನಿಗೂ ಧಮ್ಮಿಲ್ಲ... ಯಾಕಂದ್ರೆ ತಮ್ಮ ಬುದ್ಧಿಯನ್ನು ರಾಜಕೀಯ ಪಕ್ಷಗಳಿಗೆ ಅಡವಿಟ್ಟು ಗುಲಾಮಗಿರಿ ಮಾಡುವವರಿಗೆ ಪ್ರಶ್ನೆ ಮಾಡೋದರ ಹಿಂದಿರುವ ಕಾಳಜಿ, ಚರ್ಚೆ ಮಾಡುವುದರ ಹಿಂದಿರುವ ಬುದ್ದಿವಂತಿಕೆ ಹೇಗಾದರೂ ಅರ್ಥವಾಗುತ್ತದೆ ಹೇಳಿ..? ಸಂವಾದದ ಕುರಿತು ಅದೇಗಾದರೂ ಆಸಕ್ತಿ ಇರುತ್ತದೆ ಹೇಳಿ..? ಅದೇ ಪ್ರಶ್ನೆಯನ್ನು ನಮಗೆ ಕೇಳಿದರೆ, ನಾವು ಹೇಳ್ತಿದ್ವಿ,,, ನಮ್ಮ ಹೆಮ್ಮೆಯ ಮೋದಿಜಿಯವರ ಬಗ್ಗೆ ಒಂದು ಗಂಟೆಯೇನೂ, ಎರಡು ಗಂಟೆಯೇನೂ, ದಿನಪೂರ್ತಿ ಅವರನ್ನು ವರ್ಣಿಸಬಹುದು. ಆದ್ರೆ ಸಮಯದ ಅಭಾವ ಇರುವುದರಿಂದ ʼಹಿಂದಿನ ಕಾಂಗ್ರೆಸ್ ಸರ್ಕಾರ ಆರಂಭಿಸಿದ ಯೋಜನೆಗಳ್ನು ಈಗ ರಿಬ್ಬನ್ ಕಟ್ ಮಾಡಿ ಲೋಕಾರ್ಪಣೆ ಮಾಡೋದು, ನಂತರ ಅದೇ ಯೋಜನೆಗಳನ್ನು ಅಂಬಾನಿ, ಅದಾನಿಯ ತಿಗಲೆಗೆ ಅರ್ಪಣೆ ಮಾಡೋದು.

ಹೌದು, ನಮ್ಮ ಮೋದಿಜಿಯವರ ಆಡಳಿತವನ್ನು ಶಾರ್ಟಾಗಿ ಹಿಂಗೂ ಹೇಳಬಹುದು. ಹಾಗೆಯೇ, 60 ವರ್ಷದಲ್ಲಿ ಕಾಂಗ್ರೆಸ್ ಏನ್ ಮಾಡ್ತು ಅಂತ ಕೇಳಿದ ನಮ್ಮ ಮೋದಿಜಿಯವರಿಗೆ ಹೇಳೋದಾದರೆ... ಬ್ರಿಟಿಷರ ಲೂಟಿಯಿಂದ ಹರಿದು ಹಂಚಿ ಹೋಗಿದ್ದ ಭಾರತದಲ್ಲಿ, ಅದೇ ಕಾಂಗ್ರೆಸ್ ಸರ್ಕಾರ ಕಷ್ಟ ಪಟ್ಟು ಕಟ್ಟಿಸಿದ್ದ 26.700 ಕಿಲೋ ಮೀಟರ್ನಷ್ಟು ರಾಷ್ಟ್ರೀಯ ಹೆದ್ದಾರಿಗಳನ್ನು, 400 ರೈಲ್ವೆ ನಿಲ್ದಾಣಗಳು, 150 ರೈಲುಗಳು, ರೈಲ್ವೆ ಹಳಿಗಳು, ವುಡ್ ಶೆಡ್ಗಳನ್ನು, 42,300 ಕಿಲೋ ಮೀಟರ್ನಷ್ಟು ಸರ್ಕ್ಯೂಟ್ ವಿದ್ಯುತ್ ಲೇನನ್ನ, ಭಾರತ ಅನಿಲ ನಿಗಮಕ್ಕೆ ಸೇರಿದ 8 ಸಾವಿರ ಕಿಲೋ ಮೀಟರ್ನಷ್ಟು ಅನಿಲ ಮಾರ್ಗವನ್ನ, 5 ಸಾವಿರ ಮೆಗಾವ್ಯಾಟ್ನಷ್ಟು ಸಾಮರ್ಥ್ಯದ ಜಲಶಕ್ತಿ, ಸೌರಶಕ್ತಿ, ಗಾಳಿ ಶಕ್ತಿ ಸೇರಿದಂತೆ ರಾಷ್ಟ್ರೀಯ ಜಲಶಕ್ತಿ ನಿಗಮ, ಎನ್ಟಿಪಿಸಿ, ಎನ್ಎಲ್ಸಿಗೆ ಸೇರಿದ ಆಸ್ತಿಯನ್ನ, ಐಒಸಿ, ಹೆಚ್ಪಿಸಿಎಲ್ಗೆ ಸೇರಿದ 4 ಸಾವಿರ ಕಿಲೋ ಮೀಟರ್ನಷ್ಟು ಉದ್ದದ ಕೊಳವೆ ಮಾರ್ಗವನ್ನ, ಸಾರ್ವಜನಿಕ ಉಗ್ರಾಣಗಳನ್ನ, 161 ಕಲ್ಲಿದ್ದಲು ಗಣಿ ಯೋಜನೆಗಳು, 761 ಗಣಿ ಬ್ಲಾಕ್ಗಳು, ಭಾರತೀಯ ವಿಮಾನ ಪ್ರಾಧಿಕಾರದ 25 ವಿಮಾನ ನಿಲ್ದಾಣಗಳನ್ನ, 2 ರಾಷ್ಟ್ರೀಯ ಸ್ಟೇಡಿಯಂಗಳನ್ನ, 9 ಪ್ರಮುಖ ಬಂದರುಗಳಲ್ಲಿನ 31 ಯೋಜನೆಗಳ ಖಾಸಗೀಕರಣವನ್ನ ನಮ್ಮ ಹೆಮ್ಮೆಯ ಮೋದಿಜಿಯವರು ಅಕ್ಷರಶಃ ಮಾರಿಬಿಡಲು ತಯಾರಿ ಮಾಡಿಕೊಂಡಿದ್ದಾರೆ. ಅದರಲ್ಲಿ ಒಂದಿಷ್ಟು ಸರ್ಕಾರಿ ಆಸ್ತಿಯನ್ನ ಖಾಸಗೀಕರಣ ಮಾಡಿಯೇ ಬಿಟ್ಟಿದ್ದಾರೆ. ಹೀಗಂತ ಖುದ್ದು ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರೇ ಹೇಳಿದ್ದಾರೆ. ಖಾಸಗೀಕರಣ ಅಂದ್ರೆ ನಮ್ಮ ಆಸ್ತಿಯನ್ನ ಅಂದ್ರೆ ಸಾರ್ವಜನಿಕ ಆಸ್ತಿಯನ್ನ ಯಾರೋ ಒಬ್ಬ ಉದ್ಯಮಿಗಳಿಗೆ ಮಾರಾಟ ಮಾಡುವುದು ಅಂದರೆ ಎಂಥ ಅವಸ್ಥೆ ಈ ದೇಶದ್ದು ಅಲ್ವ?

ಹಾಗೆಯೇ, ನೀವು ಕೇಳಬಹುದು... ಮಾನ್ಯ ಮೋದಿಯವರು ಕಳೆದ 8 ವರ್ಷಗಳ ಅವಧಿಯಲ್ಲಿ ದೇಶದಲ್ಲಿರುವ ಸಮಸ್ತ ಹಿಂದೂಗಳಿಗೆ ಏನನ್ನೂ ಕೊಟ್ಟೇ ಇಲ್ಲವಾ? ಅಂತ... ಖಂಡಿತವಾಗಿಯೂ ಕೊಟ್ಟಿದ್ದಾರೆ ಅದೇನು ಗೊತ್ತಾ..?

ನೋಡಿದ್ರಲ್ಲ..? ಇದೇ ಇದೇ ನಮ್ ಮೋದಿಜಿ ಸಮಸ್ತ ಹಿಂದೂಗಳಿಗೆ ಕೊಟ್ಟ ಬಂಪರ್ ಗಿಫ್ಟ್... ಈ ಸಾಧನೆ ಹೇಗಾಯ್ತು ಅಂತ ಕೇಳ್ತೀರ... ಅದನ್ನು ಹೇಳಿಯೇ ಇಂದಿನ ಎಪಿಸೋಡ್ ಮುಗಿಸುವ ಸದುದ್ದೇಶ ಇದ್ದಿದ್ದರಿಂದ ಇದನ್ನು ಕಡೆಯದಾಗಿ ಹೇಳೋಕೆ ಬಂದೆ... ಈ ಮುಸ್ಲಿಮರ ಕತೆ ಬಿಟ್ಟುಬಿಡ್ರಿ... ಅವರನ್ನು ಜಾಗತಿಕ ಭಯೋತ್ಪಾದಕರು ಅಂತ ನೀಚಾತೀನೀಚರು ಎಂದೋ ಫ್ರೇಂ ಮಾಡಿಬಿಟ್ಟಿದ್ದಾರೆ. ಅದರ ಕುರಿತು ಮಾತನಾಡುತ್ತಾ ಹೋದರೆ ಎಷ್ಟು ಸಮಯವಿದ್ರೂ ಸಾಲಲ್ಲ... ಆದರೆ, ನೀವು ಆಗಲೇ ನೋಡಿದ ಪೇಪರ್ ಕಟಿಂಗ್ ಹೇಳುವ ಪ್ರಕಾರ ಹಿಂದೂ ಕೈದಿಗಳ ಸಂಖ್ಯೆ ಶೇ. 73ಕ್ಕೆ ಏರಿಕೆಯಾಗಿದೆ! ಆ ಸಂಖ್ಯೆ ಏನು ಹೇಳ್ತಿದೆ ಅಂತ ಹೇಳೋಕೆ ಮೊದಲು ಇನ್ನೊಂದು ಪೇಪರ್ ಕಟಿಂಗ್ ನೋಡ್ಕೊಂಡು ಬನ್ನಿ..

ಈಗ ಗೊತ್ತಾಯ್ತಲ್ವ? ಕಳೆದ ಒಂದೇ ಒಂದು ವರ್ಷದಲ್ಲಿ ಕರ್ನಾಟಕ ಒಂದರಲ್ಲೇ 117 ಪೊಲೀಸ್ ಠಾಣೆಗಳು ನಿರ್ಮಾಣವಾಗಿವೆ ಎಂದು ಮಾನ್ಯ ಮುಖ್ಯಮಂತ್ರಿಗಳು ಹೆಮ್ಮೆಯಿಂದ ಕೊಚ್ಚಿಕೊಂಡಿದ್ದಾರೆ... ಜೈಲುಗಳು ಹೆಚ್ಚಾಗೋದು, ಠಾಣೆಗಳು ಹೆಚ್ಚಾಗೋದು ಅಂದರೆ, ಆ ಸಮಾಜದಲ್ಲಿ, ಅದನ್ನು ನಿಯಂತ್ರಿಸುತ್ತಿರುವ ಆಡಳಿತದಲ್ಲಿ ಏನೋ ಲೋಪವಿದೆ, ಅಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯುವಲ್ಲಿ ಆ ಆಡಳಿತ ಸೋತು ಸುಣ್ಣವಾಗಿ, ನೆಲಕಚ್ಚಿದೆ ಅಂತ ಅರ್ಥ... ಅಥವಾ.. ಅದೇ ಆಡಳಿತ ಗೂಂಡಾಗಳ ಪಡೆಯನ್ನೇ ತಯಾರು ಮಾಡಿ ಸಮಾಜದೊಳಕ್ಕೆ ನುಗ್ಗಿಸಿದೆ ಎಂದು ಅರ್ಥ ತಾನೇ? ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಕೊಡುವ ಮಾಹಿತಿ ಪ್ರಕಾರ ಹಿಂದೂ ಕೈದಿಗಳ ಸಂಖ್ಯೆ ಶೇ 73ರಷ್ಟು ಹೆಚ್ಚಾಗಿದೆ ಅನ್ನೋದಾದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಹಿಂದೂಗಳನ್ನು ಯಾವುದಕ್ಕೆ ಬಳಸಿಕೊಳ್ಳುತ್ತಿದೆ ಅನ್ನೋ ಗುಮಾನಿ ಹುಟ್ಟುತ್ತದೆ ಅಲ್ಲವ? ಮುಸ್ಲಿಮರ, ಕ್ರೈಸ್ತರ, ದಲಿತರ ವಿರುದ್ಧ ಮುಗ್ಧ ಹಿಂದೂಗಳನ್ನು ಛೂ ಬಿಟ್ಟು, ಅವರ ಕೈಗೆ ತ್ರಿಶೂಲ, ಖಡ್ಗ, ದೊಣ್ಣೆ ಮುಂತಾದ ಮಾರಕಾಸ್ತ್ರಗಳನ್ನು ಕೊಟ್ಟು, ಅವರಿಂದ ಅಪರಾಧ ಮಾಡಿಸಿ, ಕೇಸು ಜಡಿಸಿ ಜೈಲಿಗೆ ಕಳಿಸುತ್ತಿರುವ ಕಾರಣವೇ ಪ್ರಸ್ತುತ ಹಿಂದೂ ಕೈದಿಗಳ ಸಂಖ್ಯೆ ಹೆಚ್ಚಾಗಲು ಕಾರಣ ಅಂದರೆ ತಪ್ಪೇನು? ಅಥವಾ ಅವರಲ್ಲಿದ್ದ ಉದ್ಯೋಗವನ್ನು, ಉದ್ಯಮವನ್ನು ಕಿತ್ತುಕೊಂಡು, ಅಭದ್ರತೆಗೆ ದೂಡಿ ಒಂದೋ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವಾದರೆ ದರೋಡೆಗಿಳಿದು ಜೈಲು ಸೇರಿರಬೇಕು ಅಂತ ಅರ್ಥ ಅಲ್ಲವಾ? ಇಷ್ಟೆಲ್ಲಾ ನಗ್ನ ಸತ್ಯಗಳು ನಮ್ಮ ಕಣ್ಣಮುಂದೆಯೇ ಇದ್ದರೂ ಇನ್ನೂ ಜೈ ಮೋದಿ, ಜೈ ಬಿಜೆಪಿ ಎಂದು ಬಾಯಿ ಬಡಿದುಕೊಂಡು ಕುಳಿತರೆ ಈ ದೇಶಕ್ಕೆ ಖಂಡಿತವಾಗಿಯೂ ಭವಿಷ್ಯವಿಲ್ಲ... ಯೋಚಿಸಿ...

-ಕನ್ನಡ ಒನ್‌ ನ್ಯೂಸ್‌ ಬಳಗ

© Copyright 2022, All Rights Reserved Kannada One News