ವಿದ್ಯುತ್‌ ದರದಂತೆ ನೀರಿನ ದರವನ್ನೂ ಹೆಚ್ಚಳ ಮಾಡಬೇಕು: ಸರಕಾರಕ್ಕೆ ಜಲಮಂಡಳಿ

ವಿದ್ಯುತ್‌ ದರದಂತೆ ನೀರಿನ ದರವನ್ನೂ ಹೆಚ್ಚಳ ಮಾಡಬೇಕು: ಸರಕಾರಕ್ಕೆ ಜಲಮಂಡಳಿ

Updated : 18.11.2022

ಬೆಂಗಳೂರು: ವಿದ್ಯುತ್ ದರ ಏರಿಕೆ ರೀತಿಯಲ್ಲಿಯೆ, ಪ್ರತಿ ವರ್ಷ ನೀರಿನ ದರ ಏರಿಕೆ ಮಾಡಲು ಅವಕಾಶ ನೀಡಬೇಕು ಎಂದು ಬೆಂಗಳೂರು ಜಲಮಂಡಳಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಂತೆ ವರ್ಷದಿಂದ ವರ್ಷಕ್ಕೆ ಖರ್ಚು ಹೆಚ್ಚಳವಾಗುತ್ತಿದೆ. ಆದರೆ, ಈ ಕುರಿತಂತೆ ಯಾವುದೇ ದರ ಪರಿಷ್ಕರಣೆಯನ್ನು ಮಾಡಿಲ್ಲ. ಹೀಗಾಗಿ, ಜಲಮಂಡಳಿಗೆ ಆರ್ಥಿಕ ಹೊರೆ ಹೆಚ್ಚಾಗಿದ್ದು, ತೊಂದರೆ ಉಂಟಾಗುತ್ತಿದೆ ಎಂದು ಜಲಮಂಡಳಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ತಿಳಿಸಿದೆ. ಸದ್ಯ ಜಲಮಂಡಳಿ ಈ ಪ್ರಸ್ತಾವನೆ ಸರಕಾರ ಯಾವ ರೀತಿಯಲ್ಲಿ ಸ್ಪಂದಿಸುತ್ತೆ, ಅದು ಜನರ ಮೇಲೆ ಯಾವ ಪರಿಣಾಮ ಬೀಳುತ್ತೆ ಎಂಬುವುದನ್ನು ಕಾದು ನೋಡಬೇಕಾಗಿದೆ. 

© Copyright 2022, All Rights Reserved Kannada One News