ಆಂಧ್ರಪ್ರದೇಶ: ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ 'ಫಾತಿಮಾ ಶೇಖ್' ಕುರಿತ ಬರಹ 8ನೇ ತರಗತಿಗೆ ಪಠ್ಯ

ಆಂಧ್ರಪ್ರದೇಶ: ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ 'ಫಾತಿಮಾ ಶೇಖ್' ಕುರಿತ ಬರಹ 8ನೇ ತರಗತಿಗೆ ಪಠ್ಯ

Updated : 07.11.2022

ಭಾರತದ ಮೊದಲ ಮಹಿಳಾ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ಅವರ ಬಗೆಗಿನ ಪಠ್ಯವನ್ನು ಎಂಟನೇ ತರಗತಿಯ ಶಾಲಾ ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಆಂಧ್ರಪ್ರದೇಶ ಸರ್ಕಾರ ಮುಂದಾಗಿದೆ. ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಕೂಡ ಈ ನಿರ್ಧಾರ ಪ್ರಕಟಿಸಿತ್ತು.

ಜನವರಿ 9, 1831ರಂದು ಜನಿಸಿದ ಫಾತಿಮಾ ಶೇಖ್ ಅವರು, ಹೆಣ್ಣು ಮಕ್ಕಳಿಗೆ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.

ಸಾಮಾಜಿಕ ಹೋರಾಟ ನಡೆಸಿದ ಕಾರಣಕ್ಕೆ 1848ರಲ್ಲಿ ಪ್ರಸಿದ್ಧ ಸಮಾಜ ಸುಧಾರಕ ದಂಪತಿಗಳಾದ ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರನ್ನು, ಅವರ ಕುಟುಂಬಗಳು ದೂರವಿಟ್ಟಾಗ ಅವರಿಗೆ ಫಾತಿಮಾ ಶೇಖ್ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ.  


© Copyright 2022, All Rights Reserved Kannada One News